Kannada Duniya

ಅಪ್ಪಿಕೊಳ್ಳುವುದನ್ನು ಯಾವುದೇ ಕಾರಣಕ್ಕೂ ಮಿಸ್ ಮಾಡಬೇಡಿ!

ಒಂದು ಅಪ್ಪುಗೆ ಸಾವಿರ ಮಾತಿಗೆ ಸಮ. ನಿಮ್ಮ ಆತ್ಮೀಯರು ದುಃಖದಲ್ಲಿರಲಿ, ಖುಷಿಯಲ್ಲಿರಲಿ ಅವರನ್ನು ತಬ್ಬಿಕೊಂಡಾಗ ನೋವು ಕಡಿಮೆಯಾಗುತ್ತದೆ ಮಾತ್ರವಲ್ಲ ಅಪ್ಪಿಕೊಂಡಾಗ ಅಳುವೂ ನಿಲ್ಲುತ್ತದೆ. ಇದು ಒತ್ತಡವನ್ನೂ ನಿವಾರಿಸುತ್ತದೆ.

ನಿಮ್ಮ ಸಂಗಾತಿಯನ್ನು ತಬ್ಬಿಕೊಳ್ಳುವ ಅವಕಾಶ ಸಿಕ್ಕಾಗಲೆಲ್ಲಾ ಮಿಸ್ ಮಾಡಬೇಡಿ ಎನ್ನುತ್ತಾರೆ ತಜ್ಞರು. ಅಪ್ಪಿಕೊಂಡಾಗ ಭುಜದ ಮೇಲೆ ತಲೆಯಿಟ್ಟು ವಿಶ್ರಾಂತಿ ಪಡೆಯುವುದು ನಿಮ್ಮ ಸಂಬಂಧದಲ್ಲಿ ಪ್ರೀತಿಯೊಂದಿಗೆ ಹೊಂದಾಣಿಕೆಯೂ ಇದೆ ಎಂಬುದನ್ನು ತೋರಿಸುತ್ತದೆ. ಈ ಅಪ್ಪುಗೆ ಹಿತವೆನಿಸುವಂತದ್ದು.

ಹಿಂದಿನಿಂದ ಬಂದು ನಿಮ್ಮ ಸಂಗಾತಿ ತಬ್ಬಿಕೊಂಡರೆ ಅವರು ನಿಮ್ಮನ್ನು ಸದಾ ಪ್ರೀತಿಸಲು ಮತ್ತು ಪ್ರೀತಿಯ ಅನುಭವ ನೀಡಲು ಬಯಸುತ್ತಾರೆ ಎಂಬುದನ್ನು ತಿಳಿಸುತ್ತದೆ. ತುಂಬಾ ಸಮಯದಲ್ಲಿ ನೀವು ಅವರ ನೆನಪಿನಲ್ಲಿ ಇದ್ದೀರಿ ಎಂದೂ ಹೇಳುತ್ತದೆ.

ಒಬ್ಬರನ್ನೊಬ್ಬರು ಬಿಗಿಯಾಗಿ ಅಪ್ಪಕೊಳ್ಳುವುದು ಅಂದರೆ ಎಂದಿಗೂ ಬೇರೆಯಾಗಲು ಬಯಸದ ಸಂಬಂಧವನ್ನು ಸೂಚಿಸುತ್ತದೆ. ನಂಬಿಕೆ ಹಾಗೂ ಬದ್ಧತೆಯೇ ಇಲ್ಲಿ ಮುಖ್ಯವಾಗಿರುತ್ತದೆ. ವೆಸ್ಟ್ ಹಗ್ ಎಂಬುದು ಪ್ರಣಯ ಹಾಗೂ ಆಳ ಸಂಬಂಧದ ಸೂಚಕವಾಗಿರುತ್ತದೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...