Kannada Duniya

ನಿಮ್ಮ ಸಂಗಾತಿಗೆ ಈ ವಿಷಯ ಹೇಳಿದರೆ ನಿಮ್ಮ ಸಂಬಂಧ ಮುರಿಯಬಹುದು…!

ಯಾವುದೇ ಸಂಬಂಧವು ನಡೆಯಲು ಪರಸ್ಪರ ತಿಳವಳಿಕೆ ಬಹಳ ಮುಖ್ಯ. ಕೆಲವೊಮ್ಮೆ ಸಣ್ಣ ವಿಚಾರಗಳಿಗೆ ಸಂಬಂಧ ಮುರಿಯುತ್ತದೆ. ಸಂಬಂಧದಲ್ಲಿ ಜಗಳ ಬರುವುದು ಸಹಜ. ಆದರೆ ನಿಮ್ಮ ಜಗಳ ಸ್ವಲ್ಪ ಸಮಯದ ನಂತರ ಕೊನೆಗೊಳ್ಳಬಹುದು. ಆದರೆ ಕೋಪದಲ್ಲಿ ಮಾತನಾಡುವ ಪದಗಳು ಸಂಗಾತಿಯ ಮನಸ್ಸು ಮತ್ತು ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಹಾಗಾಗಿ ಕೋಪ ಬಂದಾಗ ಈ ಪದಗಳನ್ನು ಹೇಳಬೇಡಿ.

-ಜಗಳವಾಡುವ ಸಂಗಾತಿಯೊಂದಿಗೆ ಸಂಬಂಧ ಕೊನೆಗೊಳಿಸುವ ಬಗ್ಗೆ ಮಾತನಾಡಬಾರದು. ಕೋಪದಲ್ಲಿ ನೀವು ಈ ಬಗ್ಗೆ ಹೇಳಿದರೆ ಅವರ ಮನಸ್ಸು ಮುರಿಯಬಹುದು.

-ಕೆಲವರು ಜಗಳವಾಡುವಾಗ ಕೋಪದಲ್ಲಿ ಸಂಗಾತಿಯನ್ನು ಶಪಿಸುತ್ತಾರೆ. ಇಂತಹ ಮಾತುಗಳನ್ನು ಹೇಳಿದರೆ ಜಗಳ ಕೊನೆಗೊಳ್ಳುವ ಬದಲು ಮತ್ತಷ್ಟು ಹೆಚ್ಚಾಗಬಹುದು. ಇದರಿಂದ ಸಂಬಂಧ ಹಾಳಾಗಬಹುದು.

-ಕೆಲವರು ಕೋಪ ಬಂದಾಗ ಸಂಗಾತಿಯನ್ನು ಬೇರೊಬ್ಬರೊಂದಿಗೆ ಹೋಲಿಸಲು ಪ್ರಾರಂಭಿಸುತ್ತಾರೆ. ಇದು ಸಂಗಾತಿಯ ಕೊಪಕ್ಕೆ ಕಾರಣವಾಗಬಹುದು. ಇದು ಸಂಬಂಧದಲ್ಲಿ ಬಿರುಕು ಮೂಡಿಸಬಹುದು.

-ಕೆಲವರು ಕೋಪದಲ್ಲಿ ಸಂಗಾತಿಗೆ ಕೆಟ್ಟ ಪದಗಳನ್ನು ಬಳಸುತ್ತಾರೆ. ಇದು ಸಂಗಾತಿಯ ಹೃದಯದಲ್ಲಿ ಆಳವಾಗಿ ನೋವನ್ನುಂಟು ಮಾಡಬಹುದು. ಇದರಿಂದ ಸಂಬಂಧ ಮುರಿಯುತ್ತದೆ.

ಇಂತಹ ಸಂಬಂಧಗಳನ್ನು ನೀವು ಬಿಟ್ಟುಬಿಡುವುದೇ ಉತ್ತಮ

-ಪ್ರತಿಯೊಬ್ಬರು ಹೆತ್ತವರನ್ನು ತುಂಬಾ ಪ್ರೀತಿಸುತ್ತಾರೆ. ಹಾಗಾಗಿ ನೀವು ಕೋಪದಲ್ಲಿ ನಿಮ್ಮ ಸಂಗಾತಿಯ ಹೆತ್ತವರ ಬಗ್ಗೆ ನಿಂದನೀಯ ಮಾತುಗಳನ್ನು ಆಡಿದರೆ ಇಬ್ಬರ ನಡುವೆ ಜಗಳ ಹೆಚ್ಚಾಗುತ್ತದೆ. ಇದರಿಂದ ಸಂಬಂಧ ಹಾಳಾಗಬಹುದು. ಹಾಗಾಗಿ ಸಂಗಾತಿಯ ಹೆತ್ತವರನ್ನು ಗೌರವಿಸಿ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...