Kannada Duniya

ಸಮಯದ ಕೊರತೆಯನ್ನು ಹೀಗೆ ನೀಗಿಸಿ

ಪತಿ ಪತ್ನಿ ಇಬ್ಬರು ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಜೊತೆಯಾಗಿ ಕಾಲ ಕಳೆಯುವುದು ಕಷ್ಟವಾಗಬಹುದು. ಅದರಲ್ಲೂ ಮಕ್ಕಳ ಲಾಲನೆ ಪಾಲನೆ ಕಡೆಗೂ ಗಮನ ಹರಿಸಬೇಕಾದ ಭಾವನಾತ್ಮಕ ಸಂವಹನ ನಡೆಸಲು ಸಮಯದ ಕೊರತೆ ಉಂಟಾಗಬಹುದು. ಇಂತಹ ಸಂದರ್ಭದಲ್ಲಿ ಸಮಯವನ್ನು ಹೊಂದಾಣಿಸಿಕೊಳ್ಳುವುದು ಹೇಗೆ?
ಚಿಕ್ಕ ಪುಟ್ಟ ಹವ್ಯಾಸಗಳನ್ನು ಜೊತೆಯಾಗಿ ಮಾಡಿ ಅಂದರೆ ಬೆಳಗಿನ ವಾಕಿಂಗ್ ಅಥವಾ ಯೋಗವನ್ನು ಜೊತೆಯಾಗಿ ಮಾಡುವುದರಿಂದ ದೈಹಿಕ ಹಾಗೂ ಭಾವನಾತ್ಮಕ ಬೆಂಬಲವು ದೊರೆಯುತ್ತದೆ. ಭಾವನೆಗಳ ವಿನಿಮಯಕ್ಕೆ ಕೊಂಚ ಸಮಯವು ಸಿಗುತ್ತದೆ. ಜಿಮ್ ನಲ್ಲಿ ಜೊತೆಯಾಗಿ ಸಮಯ ಕಳೆಯಿರಿ.
ಮೊಬೈಲ್ ನಿಂದಲೂ ಸಂಬಂಧದಲ್ಲಿ ಬಿರುಕು ಬೀಳುವ ಸಾಧ್ಯತೆ ಹೆಚ್ಚಿರುವುದರಿಂದ, ನೀವಿಬ್ಬರೂ ಜೊತೆಯಾಗಿರುವಾಗ ಮೊಬೈಲ್ ಅನ್ನು ಪಕ್ಕಕ್ಕಿಡಿ.
ವಾರಾಂತ್ಯದಲ್ಲಿ ಮನೆಯಲ್ಲಿ ಅಡುಗೆ ಮಾಡುವಾಗ ಒಬ್ಬರಿಗೊಬ್ಬರು ನೆರವಾಗಿ. ರೋಮ್ಯಾಂಟಿಕ್ ಹಾಡುಗಳು ನಿಮ್ಮ ಮೂಡ್ ಅನ್ನು ಫ್ರೆಶ್ ಆಗಿಸುತ್ತದೆ.
ಸಂಗಾತಿಯ ಮಾತನ್ನು ಆಲಿಸಿ ಹಾಗೂ ಅವರ ಅಭಿಪ್ರಾಯವನ್ನು ಕೇಳಿ ಪಡೆಯಿರಿ. ಸಾಮಾನ್ಯವಾಗಿ ಸಂಬಂಧಗಳನ್ನು ಹಾಳು ಮಾಡುವುದು ಸಂವಹನದ ಕೊರತೆ ಎಂಬುದನ್ನು ಮರೆಯದಿರಿ.

Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...