Kannada Duniya

ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿರುವವರು ರಾತ್ರಿಯ ವೇಳೆ ಈ ಜ್ಯೂಸ್ ಕುಡಿಯಿರಿ…!

ಇತ್ತೀಚಿನ ದಿನಗಳಲ್ಲಿ ಒತ್ತಡದ ಜೀವನಶೈಲಿಯಿಂದ ಅನೇಕ ಜನರು ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಚಿಂತೆ, ಆತಂಕದಿಂದ ಕೆಲವರು ರಾತ್ರಿ ಸರಿಯಾಗಿ ನಿದ್ರೆ ಕೂಡ ಮಾಡುವುದಿಲ್ಲ. ಇದರ ಪರಿಣಾಮ ನಮ್ಮ ಆರೋಗ್ಯದ ಮೇಲಾಗುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ರಾತ್ರಿಯ ವೇಳೆ ಈ ಜ್ಯೂಸ್ ಕುಡಿಯಿರಿ.

ಸಂಶೋಧನೆಯ ಪ್ರಕಾರ, ಚೆರಿ ಹಣ್ಣಿನ ರಸವನ್ನು ಸೇವಿಸುವುದರಿಂದ ರಾತ್ರಿ 10 ನಿಮಿಷಗಳಲ್ಲಿ ನಿದ್ರೆ ಬರುತ್ತದೆಯಂತೆ. ಈ ಬಗ್ಗೆ 8 ಜನರ ಮೇಲೆ ಸಂಶೋಧನೆ ನಡೆಸಿದ್ದು, ಆ ವೇಳೆ ಈ ವಿಚಾರ ತಿಳಿದುಬಂದಿದೆ. ಚೆರಿಯಲ್ಲಿರುವ ಪೋಷಕಾಂಶ ನಿದ್ರೆಯನ್ನು ಹೆಚ್ಚಿಸುವಂತಹ ಹಾರ್ಮೋನ್ ಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆಯಂತೆ. ಇದರಿಂದ ನಿಮಗೆ ಚೆನ್ನಾಗಿ ನಿದ್ರೆ ಬರುತ್ತದೆಯಂತೆ.

Sleepy after eating Rice : ಅನ್ನ ತಿಂದ ಬಳಿಕ ನಿದ್ರೆ ಬರುವುದು ಯಾಕೆ ಗೊತ್ತಾ….?

ಆದರೆ ಈ ಹಣ್ಣಿನ ರಸವನ್ನು ಸೇವಿಸುವಾಗ ಸಕ್ಕರೆಯನ್ನು ಬಳಸಬೇಡಿ. ಹಾಗೇ ರಾತ್ರಿ ಅತಿಯಾಗಿ ಆಹಾರವನ್ನು ಸೇವಿಸುವುದನ್ನು ತಪ್ಪಿಸಿ. ಹಾಗೇ ರಾತ್ರಿ ನಿದ್ರೆ ಮಾಡುವ ಸಮಯಯವನ್ನು ಸರಿ ಹೊಂದಿಸಿ ಪ್ರತಿದಿನ ಅದೇ ಸಮಯದಲ್ಲಿ ನಿದ್ರೆ ಮಾಡಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...