Kannada Duniya

ಈ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡಿದರೆ ಕ್ಯಾನ್ಸರ್ ಉಂಟಾಗಬಹುದು….!

ಕೆಲವರಿಗೆ ಹೊಟ್ಟೆಯಲ್ಲಿ ಕೆಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಆದರೆ ಅದನ್ನು ಅವರು ಗ್ಯಾಸ್ಟ್ರಿಕ್ ಎಂದು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ಹೊಟ್ಟೆಯ ಒಳಪದರಗಳಲ್ಲಿ ಕ್ಯಾನ್ಸರ್ ಕೋಶಗಳು ಬೆಳೆದು ಕರುಳಿನ ಕ್ಯಾನ್ಸರ್ ಉಂಟಾಗಬಹುದು. ಹಾಗಾಗಿ ಸಮಸ್ಯೆಯನ್ನು ಆರಂಭದಲ್ಲಿ ಕಂಡುಹಿಡಿದು ಪರಿಹರಿಸಿಕೊಳ್ಳಿ.

ಹೊಟ್ಟೆಯ ಕ್ಯಾನ್ಸರ್ ಇರುವವರಲ್ಲಿ ಆರಂಭದಲ್ಲಿ ವಾಂತಿ, ವಾಕರಿಕೆ ಸಮಸ್ಯೆ ಕಾಡುತ್ತದೆ. ಈ ಸಮಸ್ಯೆ ನಿಮಗೆ ನಿರಂತರವಾಗಿ ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

ಹೊಟ್ಟೆಯಲ್ಲಿ ಉಬ್ಬುವಿಕೆ ದೀರ್ಘಕಾಲದವರೆಗೆ ಕಂಡುಬಂದರೆ ಅದು ಕರುಳಿನ ಕ್ಯಾನ್ಸರ್ ನ ಸೂಚನೆಯಾಗಿದೆ.

ಹೊಟ್ಟೆಯಲ್ಲಿ ಕ್ಯಾನ್ಸರ್ ಇದ್ದರೆ ಎದೆನೋವು, ಎದೆ ಮತ್ತು ಹೊಟ್ಟೆಯಲ್ಲಿ ಸುಡುವ ವೇದನೆ ಕಾಡುತ್ತದೆ.

ನೀವು ಕಡಿಮೆ ಆಹಾರ ಸೇವಿಸಿದರೂ ಹೊಟ್ಟೆ ತುಂಬಾ ತುಂಬಿರುವಂತೆ ಸೂಚಿಸುತ್ತದೆ. ಇದು ಹೊಟ್ಟೆಯ ಕ್ಯಾನ್ಸರ್ ನ ಲಕ್ಷಣವಾಗಿದೆ.

ಹೊಟ್ಟೆಯಲ್ಲಿ ಸೋಂಕು, ಕ್ಯಾನ್ಸರ್ ಇದ್ದರೆ ವ್ಯಕ್ತಿಯು ಆಗಾಗ ಜ್ವರದ ಸಮಸ್ಯೆಯನ್ನು ಎದುರಿಸುತ್ತಾರೆ.

Yoga for blood purification: ರಕ್ತ ಶುದ್ಧವಾಗಲು ಪ್ರತಿದಿನ ಈ ಯೋಗಾಸನ ಅಭ್ಯಾಸ ಮಾಡಿ…!

ಹಾಗೇ ಹೊಟ್ಟೆಯಲ್ಲಿ ಕ್ಯಾನ್ಸರ್ ಇದ್ದಾಗ ಮಲದಲ್ಲಿ ರಕ್ತ ಕಾಣಿಸಿಕೊಳ್ಳುತ್ತದೆ. ಹಾಗೇ ಅತಿಸಾರ, ಮಲಬದ್ಧತೆ ಸಮಸ್ಯೆ ಕೂಡ ಕಾಡುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...