Kannada Duniya

Yoga for blood purification: ರಕ್ತ ಶುದ್ಧವಾಗಲು ಪ್ರತಿದಿನ ಈ ಯೋಗಾಸನ ಅಭ್ಯಾಸ ಮಾಡಿ…!

ದೇಹದಲ್ಲಿ ರಕ್ತ ಶುದ್ಧವಾಗಿದ್ದರೆ ಯಾವುದೇ ಕಾಯಿಲೆಗಳು ದೇಹವನ್ನು ಪ್ರವೇಶಿಸುವುದಿಲ್ಲ. ಆದರೆ ನಮ್ಮ ಕೆಟ್ಟ ಆಹಾರ ಪದ್ಧತಿಗಳಿಂದ ರಕ್ತದಲ್ಲಿ ವಿಷಕಾರಿ ಅಂಶಗಳು ಸೇರಿಕೊಳ್ಳುತ್ತಿದೆ. ಇದು ರಕ್ತವನ್ನು ಕೆಡಿಸುತ್ತಿದೆ. ಇದರಿಂದ ಮನುಷ್ಯ ಕಾಯಿಲೆ ಬೀಳುತ್ತಾರೆ. ಹಾಗಾಗಿ ನಿಮ್ಮ ರಕ್ತವನ್ನು ಶುದ್ಧಗೊಳಿಸಲು ಈ ಯೋಗಾಸನ ಅಭ್ಯಾಸ ಮಾಡಿ.

ಚೇರ್ ಪೋಸ್ : ಈ ಆಸನ ಜೀರ್ಣಾಂಗ ವ್ಯವಸ್ಥೆಯ ಕಾರ್ಯವನ್ನು ಉತ್ತಮವಾಗಿಸುತ್ತದೆ. ಇದು ಕಿಬ್ಬೊಟ್ಟೆಯ ಸ್ನಾಯುಗಳನ್ನು ಟೋನ್ ಮಾಡುತ್ತದೆ. ಇದು ದೇಹದಲ್ಲಿರುವ ವಿಷವನ್ನು ತೆಗೆದುಹಾಕಲು ಮತ್ತು ರಕ್ತವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ.

Clean Nails: ಉಗುರಿನ ಸ್ವಚ್ಛತೆಯನ್ನು ಹೇಗೆ ಕಾಪಾಡಿಕೊಳ್ಳಬೇಕು ಗೊತ್ತಾ…?

ಈಗಲ್ ಪೋಸ್ : ಈ ಆಸನ ಬೊಜ್ಜು ಸಮಸ್ಯೆ ಹೊಂದಿರುವವರಿಗೆ ಮತ್ತು ಹೃದಯ ಸಮಸ್ಯೆ ಇರುವವರಿಗೆ ಪ್ರಯೋಜನಕಾರಿಯಾಗಿದೆ. ಇದು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಇದು ದುಗ್ದರಸ ವ್ಯವಸ್ಥೆಯ ಮೂಲಕ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಅಲ್ಲದೇ ಇದು ಸೊಂಟ, ತೊಡೆಗಳು, ಭುಜ, ಮತ್ತು ಮೇಲಿನ ಬೆನ್ನಿನ ಸ್ನಾಯುಗಳಿಗೆ ವಿಶ್ರಾಂತಿ ನೀಡಲು ಸಹಾಯ ಮಾಡುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...