Kannada Duniya

ಪುರುಷರು ಶಿಶ್ನದಲ್ಲಿ ಉಂಟಾಗುವ ಈ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡಬೇಡಿ

ಪುರುಷರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸುವುದಿಲ್ಲ. ಯಾವುದೇ ಸಮಸ್ಯೆಗಳಿದ್ದರೂ ಅದನ್ನು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ಇದು ಮುಂದೆ ಗಂಭೀರ ಸಮಸ್ಯೆಗೆ ಕಾರಣವಾಗಬಹುದು. ಹಾಗಾಗಿ ಪುರುಷರು ಶಿಶ್ನದಲ್ಲಿ ಉಂಟಾಗುವ ಈ ಸಮಸ್ಯೆಗಳನ್ನು ಎಂದಿಗೂ ನಿರ್ಲಕ್ಷ್ಯ ಮಾಡಬೇಡಿ.

ಶಿಶ್ನದ ವಕ್ರತೆ : ನಿಮ್ಮ ಶಿಶ್ನ ನೇರವಾಗಿರದೆ ವಕ್ರವಾಗಿದ್ದರೆ ಅದನ್ನು ನಿರ್ಲಕ್ಷ್ಯ ಮಾಡದೆ ವೈದ್ಯರಲ್ಲಿ ಪರೀಕ್ಷೆ ಮಾಡಿಸಿಕೊಳ್ಳಿ. ಯಾಕೆಂದರೆ ಶಿಶ್ನದಲ್ಲಿ ಗಾಯವಾದಾಗ ಅದರಲ್ಲಿ ಪ್ಲೇಕ್ ಉಂಟಾಗಿ ಶಿಶ್ನ ಬಾಗುತ್ತದೆಯಂತೆ.

ಕೆಲವೊಮ್ಮೆ ಪುರುಷರ ಶಿಶ್ನದ ಮೇಲೆ ತುರಕೆ, ದದ್ದು ಮುಂತಾದವು ಮೂಡುತ್ತದೆ. ಹಾಗಾಗಿ ಇದರಲ್ಲಿ ಯಾವುದೇ ಸೋಂಕು ಕಂಡುಬಂದರೆ ವೈದ್ಯರಲ್ಲಿ ಚಿಕಿತ್ಸೆ ಪಡೆಯಿರಿ. ಇಲ್ಲವಾದರೆ ಇದು ಮುಂದೆ ಗಂಭೀರ ಸಮಸ್ಯೆಯನ್ನುಂಟುಮಾಡುತ್ತದೆ.

ಹಾಗೇ ಸಂಭೋಗದ ಸಮಯದಲ್ಲಿ ನಿಮ್ಮ ವೀರ್ಯದಲ್ಲಿ ರಕ್ತವಿದ್ದರೆ ಅದನ್ನು ನಿರ್ಲಕ್ಷ್ಯ ಮಾಡಬೇಡಿ. ಹಾಗಾಗಿ ಸ್ಖಲನದ ವೇಳೆ ವೀರ್ಯದಲ್ಲಿ ರಕ್ತವಿದೆಯೇ? ಎಂಬುದನ್ನು ಪರೀಕ್ಷಿಸಿ ವೈದ್ಯರ ಬಳಿ ತಪಾಸಣೆ ಮಾಡಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...