Kannada Duniya

ಈ ಹುಡುಗಿಯರು ರೊಮ್ಯಾಂಟಿಕ್ ಆಗಿರುತ್ತಾರಂತೆ, ಹಾಗಾಗಿ ಹುಡುಗರು ಇವರನ್ನು ತುಂಬಾ ಪ್ರೀತಿಸುತ್ತಾರಂತೆ….!

ಕೆಲವರು ಹೇಗೆಂಬುದನ್ನು ಅವರ ಮುಖ, ನಡತೆ ನೋಡಿ ತಿಳಿಯುತ್ತಾರೆ. ಆದರೆ ಜ್ಯೋತಿಷ್ ಶಾಸ್ತ್ರದ ಪ್ರಕಾರ, ವ್ಯಕ್ತಿಯ ಸ್ವಭಾವ, ನಡತೆ, ಅದೃಷ್ಟ, ಆರೋಗ್ಯ, ಕೆಲಸದ ವಿಚಾರಗಳನ್ನು ಅವರು ಜನಿಸಿದ ರಾಶಿಚಕ್ರದ ಮೂಲಕವೂ ತಿಳಿಯಬಹುದಂತೆ. ಹಾಗಾಗಿ ವೃಶ್ಚಿಕ ರಾಶಿಯಲ್ಲಿ ಜನಿಸಿದ ಹುಡುಗಿಯರ ಸ್ವಭಾವ ಹೇಗೆಂದು ತಿಳಿಯೋಣ,

ಈ ರಾಶಿಯ ಹುಡುಗಿಯರು ತುಂಬಾ ಕೋಪಿಷ್ಠರು ಆಗಿರುತ್ತಾರೆ.ಇವರಲ್ಲಿ ಸ್ವಾರ್ಥ ಭಾವನೆ ಇರುತ್ತದೆ. ಯಾರ ಮಾತು ತನ್ನ ಮುಂದೆ ನಡೆಯಲು ಅನುಮತಿಸುವುದಿಲ್ಲ. ಇವರು ಯಾವುದೇ ಕೆಲಸ ಮಾಡುವ ಮೊದಲು ತನ್ನ ಲಾಭವನ್ನು ನೋಡುತ್ತಾರೆ. ಕಠಿಣ ಪರಿಶ್ರಮದಿಂದ ಜೀವನದಲ್ಲಿ ಮುಂದೆ ಹೋಗುತ್ತಾರೆ. ಇವರು ಯಾವಾಗಲೂ ತನ್ನ ಮಾತನ್ನು ಕೇಳುವಂತಹ ಸಂಗಾತಿಯನ್ನು ಹುಡುಕುತ್ತಿರುತ್ತಾರೆ. ಆದರೆ ಕಷ್ಟದ ಸಮಯದಲ್ಲಿ ಸಂಗಾತಿಯನ್ನು ಬೆಂಬಲಿಸುತ್ತಾರೆ.

ಈ ರಾಶಿಯಲ್ಲಿ ಜನಿಸಿದ ಹುಡುಗಿಯರು ಪ್ರತಿಭಾವಂತರಾಗಿರುತ್ತಾರೆ, ಕಚೇರಿಯಲ್ಲಿ ಬಾಸ್ ಆಗುತ್ತಾರಂತೆ

ಹಣದ ವಿಚಾರದಲ್ಲಿ ಸಮಸ್ಯೆಗಳು ಹೆಚ್ಚು ಕಾಡುವುದಿಲ್ಲ. ಇವರು ವೃತ್ತಿಜೀವನವನ್ನು ತುಂಬಾ ಇಷ್ಟಪಡುತ್ತಾರೆ. ಅವರ ಕೆಲಸದಲ್ಲಿ ಬೇರೆಯವರ ಹಸ್ತಕ್ಷೇಪವನ್ನು ಇಷ್ಟಪಡುವುದಿಲ್ಲ. ಇವರು ಯಾರನ್ನೂ ಪ್ರೀತಿಸುವುದಿಲ್ಲ. ಇವರ ಹೃದಯವನ್ನು ಗೆಲ್ಲುವುದು ಬಹಳ ಕಷ್ಟ. ಒಂದು ವೇಳೆ ಇವರು ಯಾರನ್ನಾದರೂ ಪ್ರೀತಿಸಿದರೆ ಅವರಿಗಾಗಿ ಏನೂ ಬೇಕಾದರೂ ಮಾಡುತ್ತಾರೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...