Kannada Duniya

ಸಮುದ್ರ ಶಾಸ್ತ್ರದ ಪ್ರಕಾರ ಈ ಹುಡುಗಿಯರನ್ನು ಅದೃಷ್ಟವಂತರೆಂದು ಕರೆಯುತ್ತಾರಂತೆ….!

ಕೆಲವರು ಅದೃಷ್ಟದಿಂದ ಜನಿಸುತ್ತಾರೆ ಎಂದು ಹೇಳುತ್ತಾರೆ. ಅವರು ಹೋದ ಕಡೆ ಸಂತೋಷ ನೆಲೆಸಿರುತ್ತದೆಯಂತೆ. ಅವರು ಇರುವಂತಹ ಸುತ್ತಮುತ್ತಲಿನ ವಾತಾವರಣ ಆಹ್ಲಾದಕರವಾಗಿರುತ್ತದೆ. ಹಾಗಾದ್ರೆ ಸಮುದ್ರ ಶಾಸ್ತ್ರದ ಪ್ರಕಾರ ಅದೃಷ್ಟದ ಹುಡುಗಿಯರು ಈ ಗುರುತನ್ನು ಹೊಂದಿರುತ್ತಾರಂತೆ.

-ಪಾದದ ಅಡಿಯಲ್ಲಿ ಶಂಖ, ಕಮಲ, ಚಕ್ರದ ಚಿಹ್ನೆ ಹೊಂದಿರುವ ಹುಡುಗಿಯರು ತುಂಬಾ ಅದೃಷ್ಟಶಾಲಿ ಎಂದು ಪರಿಗಣಿಸಲಾಗುತ್ತದೆ. ಅಂತಹ ಹುಡುಗಿಯರು ಜೀವನದಲ್ಲಿ ಹೆಚ್ಚಿನ ಪ್ರಗತಿ ಸಾಧಿಸುತ್ತಾರಂತೆ. ಯಾರ ಕಾಲ್ಬೆರಳು ಅಗಲ ಮತ್ತು ದುಂಡಗೆ ಮತ್ತು ಕೆಂಪಾಗಿದ್ದರೆ ಅವರು ತುಂಬಾ ಅದೃಷ್ಟವಂತರಂತೆ.

-ದೇಹದ ಬಲಭಾಗಕ್ಕೆ ಹೋಲಿಸಿದರೆ ದೇಹದ ಎಡಭಾಗದಲ್ಲಿ ಹೆಚ್ಚು ಮಚ್ಚೆ ಇರುವ ಹುಡುಗಿಯರು ಕುಟುಂಬಕ್ಕೆ ತುಂಬಾ ಅದೃಷ್ಟಶಾಲಿಯಂತೆ. ಅವರು ಇರುವಂತಹ ಕುಟುಂಬದಲ್ಲಿ ಸಂತಸ, ಸೌಲಭ್ಯ ನೆಲೆಸಿರುತ್ತದೆಯಂತೆ.

-ಅಗಲವಾದ ಹಣೆಯನ್ನು ಹೊಂದಿರುವ ಹುಡುಗಿಯರು ತುಂಬಾ ಅದೃಷ್ಟವಂತರಂತೆ. ಮಹಿಳೆಯರ ಹಣೆಯು 3 ಬೆರಳಿಗಿಂತ ಅಗಲವಾಗಿರಬೇಕು ಅಂತಹ ಹುಡುಗಿಯರು ಸಂತೋಷದಿಂದಿರುತ್ತಾರಂತೆ. ಅವರು ಹೋಗುವ ಮನೆಯಲ್ಲಿ ಆಹಾರ ಮತ್ತು ಹಣದ ಕೊರತೆ ಇರುವುದಿಲ್ಲವಂತೆ.

ಒಣ ಪಾದಗಳ ಸಮಸ್ಯೆಯೇ? ಎಸೆನ್ಷಿಯಲ್ ಆಯಿಲ್ ಬಳಸಿ

-ಉದ್ದ ಮತ್ತು ಸುಂದರವಾದ ಬೆರಳುಗಳನ್ನು ಹೊಂದಿರುವ ಹುಡುಗಿಯರು ತಮ್ಮ ಗಂಡನಿಗೆ ಅದೃಷ್ಟ ಶಾಲಿಯಂತೆ. ಅಂತಹ ಹುಡುಗಿಯರ ಮದುವೆಯ ನಂತರ ಅವರ ಪತಿ ಉತ್ತಮ ಸ್ಥಾನದಲ್ಲಿರುತ್ತಾರಂತೆ. ಅವರಿಗೆ ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ಕಾಣಿಸುತ್ತದೆಯಂತೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...