Kannada Duniya

ಈ ಪೋಷಕಾಂಶಗಳು ಮಗುವಿಗೆ ಗರ್ಭದಲ್ಲಿ ಸಿಗದಿದ್ದರೆ ಪ್ರಾಸ್ಟೇಟ್ ಕ್ಯಾನ್ಸರ್ ಬರುತ್ತದೆಯಂತೆ

ಗರ್ಭಾವಸ್ಥೆಯಲ್ಲಿ ಮಹಿಳೆಯರು ಸಾಕಷ್ಟು ಆಹಾರವನ್ನು ಸೇವಿಸಬೇಕು. ಇದರಿಂದ ಮಗುವಿನ ಬೆಳವಣಿಗೆ ಉತ್ತಮವಾಗಿರುತ್ತದೆ. ಕೆಲವರು ಸರಿಯಾದ ಪೋಷಕಾಂಶಗಳನ್ನು ಸೇವಿಸುವುದಿಲ್ಲ. ಇದರಿಂದ ಮಗುವಿಗೆ ಮುಂದೆ ಸಮಸ್ಯೆಯಾಗುತ್ತದೆಯಂತೆ. ಹೌದು ಈ ಪೋಷಕಾಂಶಗಳು ಮಗುವಿಗೆ ಗರ್ಭದಲ್ಲಿ ಸಿಗದಿದ್ದರೆ ಪ್ರಾಸ್ಟೇಟ್ ಕ್ಯಾನ್ಸರ್ ಬರುತ್ತದೆಯಂತೆ.

ಪ್ರಾಸ್ಟೇಟ್ ಪುರುಷರಲ್ಲಿ ಸಂತಾನೋತ್ಪತ್ತಿ ವ್ಯವಸ್ಥೆಯ ಒಂದು ಭಾಗವಾಗಿದೆ. ಇದು ಆಕ್ರೋಡು ಆಕಾರದಲ್ಲಿದ್ದು, ಮೂತ್ರಕೋಶದ ಕೆಳಗೆ ಇರುತ್ತದೆ. ಕೆಲವು ಪುರುಷರು ಪ್ರಾಸ್ಟೇಟ್ ಕ್ಯಾನ್ಸರ್ ಗೆ ತುತ್ತಾಗಿದ್ದಾರೆ. ಇದರಿಂದ ಮೂತ್ರ ವಿಸರ್ಜನೆಯಲ್ಲಿ ಸಮಸ್ಯೆಯಾಗುತ್ತದೆ.

ಅಧ್ಯಯನವೊಂದರ ಪ್ರಕಾರ ಗರ್ಭಾವಸ್ಥೆಯಲ್ಲಿ ತಾಯಿ ಸರಿಯಾಗಿ ಪ್ರೋಟೀನ್ ಅನ್ನು ಸೇವಿಸದಿದ್ದರೆ ಹುಟ್ಟುವ ಮಗು ಗಂಡಾಗಿದ್ದರೆ ಅದು ಪ್ರಾಸ್ಟೇಟ್ ಕ್ಯಾನ್ಸರ್ ಗೆ ಒಳಗಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಹಾಗಾಗಿ ಗರ್ಭಾವಸ್ಥೆಯಲ್ಲಿ ತಾಯಿ ಹಾಲು, ಹಣ್ಣು, ತರಕಾರಿಗಳು, ಮೊಟ್ಟೆ, ಮೀನು, ಮಾಂಸ ಮತ್ತು ಧಾನ್ಯಗಳನ್ನು ಸೇವಿಸಬೇಕು.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...