Kannada Duniya

ವ್ಯಾಯಾಮಕ್ಕೂ ಮುನ್ನ ಇವುಗಳನ್ನು ಸೇವಿಸಿದರೆ ತೂಕವನ್ನು ನಿಯಂತ್ರಿಸಬಹುದು

ಕೆಲವರು ತೂಕವನ್ನು ಇಳಿಸಿಕೊಳ್ಳಲು ಹಲವಾರು ಕ್ರಮಗಳನ್ನು ಅನುಸರಿಸುತ್ತಾರೆ. ಅದರಲ್ಲಿ ವ್ಯಾಯಾಮ ಕೂಡ ಒಂದು. ಇದು ದೇಹವನ್ನು ಫಿಟ್ ಆಗಿಡುತ್ತದೆ ನಿಜ. ಆದರೆ ವ್ಯಾಯಾಮದ ನಡುವೆ ಕೆಲವರಿಗೆ ಹಸಿವಾಗುತ್ತದೆ. ಇದರಿಂದ ವ್ಯಾಯಾಮ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ವ್ಯಾಯಾಮಕ್ಕೂ ಮುನ್ನ ಇವುಗಳನ್ನು ಸೇವಿಸಿದರೆ ತೂಕವನ್ನು ನಿಯಂತ್ರಿಸಬಹುದು.

ನೀವು ವ್ಯಾಯಾಮ ಮಾಡುವ ಮೊದಲು ಕಾರ್ಬೋಹೈಡ್ರೇಟ್ ಸಮೃದ್ಧವಾಗಿರುವ ಆಹಾರ ಸೇವಿಸಿ. ಇದು ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ.

ವ್ಯಾಯಾಮ ಮಾಡುವ ಸಮಯದಲ್ಲಿ ಕೆಲವರು ದೇಹದಲ್ಲಿ ಸಕ್ಕರೆ ಮಟ್ಟ ಕಡಿಮೆಯಾಗುತ್ತದೆ. ಹಾಗಾಗಿ ವ್ಯಾಯಾಮಕ್ಕೂ ಮುನ್ನ ಹಣ್ಣುಗಳನ್ನು ಸೇವಿಸಿ.

ಅಲ್ಲದೇ ವ್ಯಾಯಾಮಕ್ಕೂ ಮುನ್ನ ಪ್ರೋಟೀನ್ ಅನ್ನು ಸೇವಿಸಿ. ಇದು ಸ್ನಾಯುಗಳನ್ನು ಬಲಗೊಳಿಸುತ್ತದೆ.

ವ್ಯಾಯಾಮ ಮಾಡುವಾಗ ಬೆವರು ಸುರಿಯುತ್ತಿರುತ್ತದೆ. ಹಾಗಾಗಿ ನಿಮ್ಮ ದೇಹವನ್ನು ಹೈಡ್ರೇಟ್ ಮಾಡಲು ಸಾಕಷ್ಟು ನೀರನ್ನು ಕುಡಿಯಿರಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...