Kannada Duniya

ಈ ತಪ್ಪನ್ನು ಮಾಡಬೇಡಿ ಹಣ್ಣುಗಳನ್ನು ತಿನ್ನುವಾಗ….!

ಹಣ್ಣುಗಳು ಆರೋಗ್ಯಕ್ಕೆ ತುಂಬಾ ಉತ್ತಮ. ಇದರಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು. ಆದರೆ ಅದನ್ನು ಸರಿಯಾದ ರೀತಿಯಲ್ಲಿ ಸೇವಿಸಿದರೆ ಅದರಿಂದ ಹಲವು ಪ್ರಯೋಜನವನ್ನು ಪಡೆಯಬಹುದು. ಹಾಗಾಗಿ ಹಣ್ಣುಗಳನ್ನು ಸೇವಿಸುವಾಗ ಈ ತಪ್ಪನ್ನು ಮಾಡಬೇಡಿ.

ಹಣ್ಣಗಳನ್ನು ಹೆಚ್ಚು ಸಮಯ ಕತ್ತರಿಸಿಟ್ಟು ತಿನ್ನಬೇಡಿ. ಹೆಚ್ಚಾಗಿ ಕೆಲಸಕ್ಕೆ ಹೋಗುವವರು ಹಣ್ಣುಗಳನ್ನು ಟಿಫನ್ ಗೆ ತೆಗೆದುಕೊಂಡು ಹೋಗುತ್ತಾರೆ. ಇಂತಹ ಹಣ್ಣುಗಳಲ್ಲಿ ಪೋಷಕಾಂಶ ನಾಶವಾಗುತ್ತದೆ. ಇದರಿಂದ ಸಂಪೂರ್ಣ ಪ್ರಯೋಜನ ಸಿಗುವುದಿಲ್ಲ.

ಕೆಲವರು ಹಣ್ಣುಗಳಿಗೆ ಉಪ್ಪನ್ನು, ಚಾಟ್ ಮಸಾಲೆಗಳನ್ನು ಹಚ್ಚಿ ತಿನ್ನುತ್ತಾರೆ. ಇದರಿಂದ ಹಣ್ಣುಗಳಲ್ಲಿರುವ ಪೋಷಕಾಂಶ ನಾಶವಾಗುತ್ತದೆ.

8 ಗಂಟೆಗಳ ಕಾಲ ನಿದ್ರೆ ಮಾಡಿದರೂ ಬೆಳಿಗ್ಗೆ ನಿಮಗೆ ದಣಿವಾಗುತ್ತಿದ್ದರೆ ಅದಕ್ಕೆ ಇದೇ ಕಾರಣ…!

ಮಾವು , ಬಾಳೆಹಣ್ಣು, ಪಪ್ಪಾಯ, ದಾಳಿಂಬೆ ಮುಂತಾದ ಹಣ್ಣುಗಳ ಸಿಪ್ಪೆಯನ್ನು ತೆಗೆದು ತಿನ್ನಿ. ಹಾಗೇ ಸೇಬು, ಪೇರಳೆ ಹಣ್ಣುಗಳನ್ನು ಸಿಪ್ಪೆ ಸಹಿತ ತಿಂದರೆ ಒಳ್ಳೆಯದು.

ಹುಳಿ ಹಣ್ಣುಗಳನ್ನು ತಿನ್ನುವಾಗ ಕಾಫಿ, ಟೀ, ಹಾಲು ತಿನ್ನಬೇಡಿ. ಇದು ಚರ್ಮದ ಅಲರ್ಜಿಯನ್ನು ಉಂಟುಮಾಡುತ್ತದೆ. ಇದರಿಂದ ಜೀರ್ಣಕ್ರಿಯೆ ಸಮಸ್ಯೆ ಉಂಟಾಗುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...