Kannada Duniya

ಮಧ್ಯಾಹ್ನದ ಊಟಕ್ಕೆ ಮೊಸರನ್ನ ಸೇವಿಸಿದರೆ ಏನಾಗುತ್ತದೆ ಗೊತ್ತಾ…?

ಮೊಸರು ಆರೋಗ್ಯಕ್ಕೆ ತುಂಬಾ ಉತ್ತಮ. ಇದರಲ್ಲಿ ದೇಹದ ಆರೋಗ್ಯಕ್ಕೆ ಬೇಕಾಗುವಂತಹ ಅಗತ್ಯವಾದ ಪೋಷಕಾಂಶಗಳಿವೆ. ಇದರಿಂದ ಹಲವು ಸಮಸ್ಯೆಗಳನ್ನು ನಿವಾರಿಸಕೊಳ್ಳಬಹುದು. ಹಾಗಾದ್ರೆ ಮಧ್ಯಾಹ್ನದ ವೇಳೆಗೆ ಮೊಸರನ್ನ ಸೇವಿಸಿದರೆ ಏನೆಲ್ಲಾ ಪ್ರಯೋಜನವಿದೆ ಎಂಬುದನ್ನು ತಿಳಿದುಕೊಳ್ಳಿ.

-ಇದು ತೂಕ ಇಳಿಸಿಕೊಳ್ಳಲು ಸಹಕಾರಿ. ಹಾಗಾಗಿ ಮಧ್ಯಾಹ್ನದ ವೇಳೆಗೆ ನಿಯಮಿತವಾಗಿ ಮೊಸರನ್ನ ಸೇವಿಸುವುದರಿಂದ ತೂಕವನ್ನು ಇಳಿಸಿಕೊಳ್ಳಬಹುದು.

-ಬೇಸಿಗೆ ಕಾಲದಲ್ಲಿ ದೇಹ ತಂಪಾಗಿಡಲು ಮೊಸರನ್ನ ಸಹಕಾರಿಯಾಗಿದೆ. ಹಾಗಾಗಿ ಮಧ್ಯಾಹ್ನದ ವೇಳೆ ಮೊಸರನ್ನ ಸೇವಿಸಿದರೆ ದೇಹ ತಂಪಾಗಿರುತ್ತದೆ ಮಾತ್ರ ಜೀರ್ಣಕ್ರಿಯೆ ಸುಧಾರಿಸುತ್ತದೆ ಮತ್ತು ಹಸಿವು ಕಡಿಮೆಯಾಗುತ್ತದೆ.

ಮೊಸರು ದಪ್ಪವಾಗಿ, ರುಚಿಯಾಗಿ ಬರಲು ಈ ಟ್ರಕ್ಸ್ ಫಾಲೋ ಮಾಡಿ

-ನಿಮ್ಮ ದೇಹದಲ್ಲಿ ಶಕ್ತಿ ಕಡಿಮೆ ಇದ್ದರೆ ಮಧ್ಯಾಹ್ನದ ವೇಳೆಗೆ ಮೊಸರನ್ನ ಸೇವಿಸಿ. ಇದರಲ್ಲಿ ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಇದ್ದು, ಇದು ದೇಹದ ಶಕ್ತಿ ಹೆಚ್ಚಾಗುತ್ತದೆ.

-ಮೊಸರಿನಲ್ಲಿ ಆ್ಯಂಟಿ ಆಕ್ಸಿಡೆಂಟ್ಸ್ ಗಳು ಸಮೃದ್ಧವಾಗಿದೆ. ಮಧ್ಯಾಹ್ನದ ವೇಳೆ ಮೊಸರನ್ನವನ್ನು ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...