Kannada Duniya

ಬಾಳೆಹಣ್ಣು ಅಗತ್ಯಕ್ಕಿಂತ ಜಾಸ್ತಿ ತಿಂದರೆ ಏನಾಗುತ್ತೆ ಗೊತ್ತಾ…?

ಬಾಳೆಹಣ್ಣು ರುಚಿಕರ ಹಣ್ಣು, ಪೋಷಕಾಂಶಗಳ ಆಗರ ಎಂಬುದು ನಿಜ. ಆದರೆ ಅತಿಯಾಗಿ ಬಾಳೆಹಣ್ಣು ಸೇವಿಸುವುದರಿಂದ ಹಲವು ಸಮಸ್ಯೆಗಳಾಗಬಹುದು ಎಂಬುದು ನಿಮಗೆ ತಿಳಿದಿರಲಿ.

ಬಾಳೆಹಣ್ಣಿನಲ್ಲಿ ವಿಟಮಿನ್ ಬಿ6 ಧಾರಾಳವಾಗಿದ್ದು ಇದನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದ ನರಗಳು ಹಾನಿಗೆ ಒಳಗಾಗುವ ಸಂಭವವಿದೆ. ಅಸ್ತಮಾ ಇರುವವರು ಇದನ್ನು ತಿನ್ನದೆ ದೂರವಿರುವುದು ಒಳ್ಳೆಯದು. ಮಕ್ಕಳು ವಿಪರೀತ ಬಾಳೆಹಣ್ಣು ತಿಂದರೆ ಲೂಸ್ ಮೋಷನ್ ಕಾಣಿಸಿಕೊಳ್ಳಬಹುದು.

Aloe Vera Juice: ಅಲೋವೆರಾ ಜ್ಯೂಸ್ ಸೇವಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆಯೇ…?

ಇದರಲ್ಲಿ ನಾರಿನಂಶ ಮತ್ತು ಪಿಷ್ಟ ಸಮೃದ್ಧವಾಗಿರುವುದರಿಂದ ನೀವು ಬಾಳೆಹಣ್ಣು ಹೆಚ್ಚು ತಿಂದಷ್ಟು ಇತರ ಆಹಾರಗಳು ನಿಮ್ಮ ಹೊಟ್ಟೆಯಲ್ಲಿ ಹಿಡಿಯುವುದಿಲ್ಲ. ಹಾಗಾಗಿ ಇತರ ಪೋಷಕಾಂಶಗಳು ನಿಮ್ಮ ದೇಹಕ್ಕೆ ಸಿಗದೆ ಸಮಸ್ಯೆ ಉಂಟಾಗಬಹುದು.

ಅತಿಯಾದ ನಾರಿನಂಶದ ಕಾರಣಕ್ಕೆ ಜೀರ್ಣಕ್ರಿಯೆಯೂ ನಿಧಾನವಾಗಬಹುದು. ದೇಹ ತೂಕ ಹೆಚ್ಚಾಗುತ್ತದೆ. ದಿನಕ್ಕೆ ಎರಡರಿಂದ ಹೆಚ್ಚು ಬಾಳೆಹಣ್ಣು ಸೇವಿಸಿದರೆ ನಿದ್ರಾಹೀನತೆ ಕಾಡಬಹುದು. ಇದರಲ್ಲಿರುವ ಸಕ್ಕರೆ ಅಂಶದಿಂದಾಗಿ ಹಲ್ಲಿನ ಮೇಲೆಯೂ ದುಷ್ಪರಿಣಾಮಗಳು ಕಾಣಿಸಿಕೊಂಡಾವು.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...