Kannada Duniya

ಮನೆಯಲ್ಲಿ ಕ್ಯಾಲರಿ ಬರ್ನ್ ಮಾಡುವುದು ಹೇಗೆ?

ತೂಕ ಇಳಿಸಿಕೊಳ್ಳಬೇಕು ಎಂಬುದು ಹಲವರ ಬಯಕೆ. ಅದಕ್ಕಾಗಿ ಜಿಮ್ ಗೆ ಹೋಗುವ ಅಗತ್ಯವಿಲ್ಲ. ದಿನಚರಿಯಲ್ಲಿ ಈ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ನಿಮ್ಮ ದೇಹ ತೂಕವನ್ನು ಸುಲಭವಾಗಿ ಇಳಿಸಬಹುದು.

ಕ್ಯಾಲರಿ ಬರ್ನ್ ಮಾಡುವ ಮೂಲಕ ದೇಹ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಎಂಬುದು ಎಲ್ಲರಿಗೂ ತಿಳಿದ ವಿಚಾರ. ಅದಕ್ಕಾಗಿ ನೀವು ಮನೆಯನ್ನು ನಿತ್ಯ ಸ್ವಚ್ಛಗೊಳಿಸಲು ಬಳಸುವ ವ್ಯಾಕ್ಯೂಮ್ ಕ್ಲೀನರ್ ಅನ್ನು ಬದಿಗಿಡಿ. ಸ್ವಚ್ಛವಾದ ಕೋಲು ಹಾಗೂ ಬಟ್ಟೆಯಿಂದ ನೆಲ ಸ್ವಚ್ಛಗೊಳಿಸಿ. ಇದರಿಂದ ದೇಹದ ಪ್ರಮುಖ ಸ್ನಾಯುಗಳು ಕೆಲಸ ಪಡೆದುಕೊಳ್ಳುತ್ತದೆ ಹಾಗೂ ಕ್ಯಾಲರಿ ಬರ್ನ್ ಸುಲಭವಾಗುತ್ತದೆ.

ವಾಷಿಂಗ್ ಮಷೀನ್ ಅಥವಾ ಲಾಂಡ್ರಿಯ ಮೂಲಕ ಬಟ್ಟೆ ಒಗೆಯುವ ಬದಲು ಕೈಯಿಂದಲೇ ಬಟ್ಟೆ ಒಗೆಯಿರಿ. ಇದು ಮಣಿಕಟ್ಟು ಹಾಗೂ ತೋಳುಗಳಿಗೆ ಅತ್ಯುತ್ತಮ ವ್ಯಾಯಾಮವನ್ನು ನೀಡುತ್ತದೆ ಹಾಗೂ  ಸುಲಭವಾಗಿ ಕ್ಯಾಲರಿ ಬರ್ನ್ ಮಾಡುತ್ತದೆ.

ಗಾರ್ಡನಿಂಗ್ ಅಥವಾ ತೋಟಗಾರಿಕೆ ಒತ್ತಡವನ್ನು ನಿವಾರಣೆ ಮಾಡುವುದರ ಜೊತೆಗೆ ನಿಮ್ಮನ್ನು ದೈಹಿಕವಾಗಿ ಸದೃಢವಾಗಿಸುತ್ತದೆ. ಅವುಗಳಿಗೆ ನೀರು ಉಳಿಸುವುದು ಬುಡವನ್ನು ಅಗೆಯುವುದು ಎಲ್ಲವೂ ಭುಜ ಹಾಗೂ ತೋಳುಗಳಿಗೆ ಉತ್ತಮ ವ್ಯಾಯಾಮ ನೀಡುತ್ತದೆ. ವಾರಕ್ಕೊಮ್ಮೆ ಮನೆಯಲ್ಲಿ ಕಾರನ್ನು ಸ್ವಚ್ಛಗೊಳಿಸುವುದರಿಂದ ದೇಹದ ಹಲವು ಭಾಗಗಳಿಗೆ ಉತ್ತಮ ವ್ಯಾಯಾಮ ದೊರೆಯುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...