Kannada Duniya

ಇತರರ ಕಾಳಜಿಯಲ್ಲಿ ನಿಮ್ಮನ್ನು ನೀವು ಮರೆಯದಿರಿ!

ಇತ್ತೀಚಿನ ದಿನಗಳಲ್ಲಿ ನಾವು ನಮ್ಮ ಬಗ್ಗೆ ಆಲೋಚಿಸುವುದನ್ನು ಬಿಟ್ಟು ಉಳಿದೆಲ್ಲಾ ಸಂಗತಿಗಳನ್ನು ಮಾಡುತ್ತಿರುತ್ತೇವೆ. ನಮ್ಮ ಬಗ್ಗೆ ಕಾಳಜಿ ವಹಿಸುವುದು ನಮಗೆ ಮರೆತೇ ಹೋಗಿರುತ್ತದೆ. ಹಾಗಿದ್ದರೆ ನಮ್ಮನ್ನು ನಾವು ಪ್ರೀತಿಸುವುದು ಹೇಗೆ?

ಇತರರಿಗೆ ಸಹಾಯ ಮಾಡುವುದು ಒಳ್ಳೆಯ ಕೆಲಸ ಎಂಬುದರಲ್ಲಿ ಎರಡು ಮಾತಿಲ್ಲ. ಹಾಗೆಂದು ನೀವು ನಿಮ್ಮನ್ನು ನಿರ್ಲಕ್ಷಿಸಿಕೊಳ್ಳುವುದು ಕೂಡಾ ತಪ್ಪು. ಅಂಥ ಸಂದರ್ಭದಲ್ಲಿ ನಿಮಗೆ ಒಂಟಿತನ ಇಲ್ಲವೇ ಖಿನ್ನತೆಯಂಥ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಇನ್ನೊಬ್ಬರ ಬಗ್ಗೆ ಮಾತ್ರ ಆಲೋಚಿಸುತ್ತಾ ಇರುವಾಗ ನಿಮ್ಮ ಬಗ್ಗೆ ಕಾಳಜಿ ಇಲ್ಲದಾಗ ಕೊನೆಗೊಂದು ದಿನ ನೀವು ಒಬ್ಬಂಟಿ ಎನಿಸಬಹುದು. ಇದರಿಂದ ಮಾನಸಿಕ ಸಮಸ್ಯೆಗಳು ಹೆಚ್ಚುತ್ತಾ ಹೋಗಬಹುದು.

ಪ್ರತಿಫಲವಾಗಿ ನೀವು ಪ್ರೀತಿಸುವ ವ್ಯಕ್ತಿ ನಿಮ್ಮ ಬಗ್ಗೆ ಆಸಕ್ತಿ ತೋರದಾಗ ಮನಸ್ಸಿನಲ್ಲಿ ಅತೃಪ್ತಿಯ ಭಾವನೆ ಮೂಡಬಹುದು. ನಾನು ಎಲ್ಲರಿಗೂ ನೆರವಾದರೂ ನನ್ನ ಕಷ್ಟಕ್ಕೆ ಯಾರೂ ಇಲ್ಲ ಎಂಬ ನೋವು ಕಾಡಬಹುದು.

ಯಾವುದೇ ಪರಿಹಾರವಾಗದ ಸಮಸ್ಯೆ ಇದ್ದರೂ ಸ್ನೇಹಿತರೊಂದಿಗೆ ಅಥವಾ ಆತ್ಮೀಯರೊಂದಿಗೆ ಹಂಚಿಕೊಳ್ಳಲು ಮರೆಯದಿರಿ. ಪರಿಹಾರವಿಲ್ಲದ ಸಮಸ್ಯೆಯಿಲ್ಲ ಎಂಬುದನ್ನು ಅರಿಯಿರಿ. ಆಪ್ತ ಸಲಹೆಗಾರರ ನೆರವು ಪಡೆದುಕೊಳ್ಳಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...