Kannada Duniya

ಹಲ್ಲು ನೋವಿಗೆ ಇಲ್ಲಿದೆ ತಕ್ಷಣ ಪರಿಹಾರ….!

ಹಲ್ಲು ನೋವು ಬಂತೆಂದರೆ ಸಾಕು, ಇಡೀ ಬಾಯಿಯನ್ನೆ ಕತ್ತರಿಸಿಕೊಂಡು ಬಿಡುವಷ್ಟು ಸಿಟ್ಟು ಬರುತ್ತದೆ. ಹಲ್ಲು ನೋವಿನಿಂದಾಗಿ ಸಾಕಷ್ಟು ಜನ ಊಟ ತಿಂಡಿ ಬಿಟ್ಟು ನರಳುತ್ತಿರುತ್ತಾರೆ. ವೈದ್ಯರನ್ನು ಭೇಟಿ ಮಾಡುವವರೆಗೆ ಹಲ್ಲು ನೋವಿನ ನಿವಾರಣೆಗೆ ಇಲ್ಲಿದೆ ತಕ್ಷಣ ಪರಿಹಾರ.

-ಪರಿಹಾರ: ತಾಜಾ ಶುಂಠಿಯ 1/2 ಇಂಚಿನ ತುಂಡು,1/4 ಟೀಸ್ಪೂನ್ ಉಪ್ಪು

ವಿಧಾನ: ಶುಂಠಿಯನ್ನು ಪುಡಿಮಾಡಿ, ನಂತರ ಉಪ್ಪು ಸೇರಿಸಿ ಮತ್ತು ಅದನ್ನು ಮತ್ತೆ ನುಜ್ಜುಗುಜ್ಜಾಗಿ ಜಜ್ಜಿ.ಈ ಶುಂಠಿ ಉಪ್ಪಿನ ಮಿಶ್ರಣವನ್ನು ಹಲ್ಲಿನ ಸುತ್ತಲೂ ಅನ್ವಯಿಸಿ.

-ಲವಂಗದಲ್ಲಿ ಯುಜೆನಾಲ್ ಎಂದು ಕರೆಯಲ್ಪಡುವ ಅಂಶವಿದೆ. ಇದು ನೋವು ನಿವಾರಕವಾಗಿ ಕೆಲಸ ಮಾಡುತ್ತದೆ. ಹಾಗಾಗಿ ಲವಂಗವನ್ನು ಪುಡಿಮಾಡಿ ಹಲ್ಲಿನ ಕುಳಿಯೊಳಗೆ ಇಟ್ಟುಕೊಳ್ಳಿ. ಇದರಿಂದ ಅದರಲ್ಲಿರುವ ಬ್ಯಾಕ್ಟೀರಿಯಾಗಳು ನಾಶವಾಗಿ ಹಲ್ಲು ನೋವು ನಿವಾರಣೆಯಾಗುತ್ತದೆ.

-ಪುದೀನಾ ತಾತ್ಕಾಲಿಕವಾಗಿ ನೋವನ್ನು ನಿವಾರಿಸಲು ಸಹಕಾರಿ. ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ, ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಪುದೀನಾ ಎಲೆಯ ಪೇಸ್ಟ್ ಅನ್ನು ಹಲ್ಲುಗಳ ಮೇಲೆ ಇಟ್ಟುಕೊಳ್ಳುವುದರಿಂದ ನೋವು ಕಡಿಮೆಯಾಗುತ್ತದೆ.

-ಬೆಳ್ಳುಳ್ಳಿಯಲ್ಲಿ ಆಲಿಸಿನ್ ಅಂಶವಿದೆ. ಇದು ಹಲ್ಲು ನೋವಿಗೆ ಕಾರಣವಾಗುವಂತಹ ಬ್ಯಾಕ್ಟೀರಿಯಾಗಳನ್ನು ನಿವಾರಿಸುತ್ತದೆ. ಹಾಗಾಗಿ ನೋವಿರುವ ಪ್ರದೇಶದಲ್ಲಿ ಬೆಳ್ಳುಳ್ಳಿಯನ್ನು ಜಜ್ಜಿ ಹಚ್ಚಿ.

Fruits for bright teeth: ಬಾಯಿಯನ್ನು ಸ್ವಚ್ಛಗಿಡುವ ಹಣ್ಣುಗಳಿವು…!

ಇದು ಕೇವಲ ತಕ್ಷಣಕ್ಕೆ ಮಾಡಲಾದ ಪರಿಹಾರ. ಇದರ ನಂತರ ವೈದ್ಯರನ್ನು ಭೇಟಿ ಮಾಡಲು ಮರೆಯದಿರಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...