Kannada Duniya

Fruits for bright teeth: ಬಾಯಿಯನ್ನು ಸ್ವಚ್ಛಗಿಡುವ ಹಣ್ಣುಗಳಿವು…!

ನಿಮ್ಮ ಹಲ್ಲುಗಳು ಸದಾ ಹೊಳೆಯುತ್ತಿರಬೇಕೆ? ಹಾಗಿದ್ದರೆ ನೀವು ಈ ಹಣ್ಣುಗಳನ್ನು ಸೇವಿಸುವ ಅಭ್ಯಾಸ ಬೆಳೆಸಿಕೊಳ್ಳಿ. ಇದರಿಂದ ಹಲ್ಲುಗಳ ಸಮಸ್ಯೆಯಿಂದ ನೀವು ಮುಕ್ತಿ ಹೊಂದಬಹುದು.

ಸ್ಟ್ರಾಬೆರಿ ಹಣ್ಣು ಹಲ್ಲಿನ ಮೇಲಿನ ಕಲೆಗಳನ್ನು ನಿವಾರಿಸಲು ನೆರವಾಗುತ್ತದೆ. ಸ್ಟ್ರಾಬೆರಿ ಹಣ್ಣನ್ನು ಕಿವುಚಿ. ಅದಕ್ಕೆ ಬೇಕಿಂಗ್ ಸೋಡಾ ಬೆರೆಸಿ ಹಲ್ಲಿನ ಮೇಲೆ ಹಚ್ಚಿ. ಐದು ನಿಮಿಷ ಹಾಗೆ ತಿಕ್ಕಿ. ಬಳಿಕ ಬ್ರಶ್ ಮಾಡಿದರೆ ಹಲ್ಲುಗಳು ವಿಶೇಷ ಹೊಳಪು ಪಡೆದುಕೊಳ್ಳುತ್ತವೆ.

ಹಲ್ಲುಗಳು ಕೆಟ್ಟು ಹೋಗುವುದನ್ನು ತಡೆಯಲು ಈ ಮನೆಮದ್ದನ್ನು ಪ್ರಯತ್ನಿಸಿ

ಕಿತ್ತಳೆ ಹಣ್ಣು, ದ್ರಾಕ್ಷಿ ಹಾಗೂ ಮೂಸಂಬಿ ಸೇವನೆಯಿಂದ ವಸಡುಗಳಲ್ಲಿ ಜುಮ್ ಜುಮ್ ಸಂವೇದನೆ ಉಂಟಾಗುವುದು ನಿಲ್ಲುತ್ತದೆ. ಸೇಬನ್ನು ಸೇವಿಸುವುದರಿಂದ ಹಲ್ಲುಗಳಿಗೆ ಮಸಾಜ್ ದೊರೆತಂತಾಗುತ್ತದೆ. ಇದು ಹಲ್ಲನ್ನೂ ಕ್ಲೀನ್ ಮಾಡುತ್ತದೆ.

ನಾರಿನ ಹಣ್ಣುಗಳನ್ನು ಹೆಚ್ಚು ತಿನ್ನುವುದರಿಂದ ಹಲ್ಲುಗಳು ಸ್ವಚ್ಛಗೊಳ್ಳುತ್ತವೆ. ಬಾಳೆಹಣ್ಣಿನಲ್ಲಿರುವ ಫೈಬರ್ ಅಂಶ ಹಲ್ಲಿನಲ್ಲಿ ಸಿಕ್ಕಿಹಾಕಿಕೊಂಡ ಕಸವನ್ನು ದೂರಮಾಡುತ್ತದೆ. ಇದರ ಸಿಪ್ಪೆಯಿಂದ ಹಲ್ಲುಜ್ಜುವುದರಿಂದ ಹಲ್ಲುಗಳು ಬಿಳಿಯಾಗುತ್ತವೆ. ಕಿವಿ ಹಣ್ಣು ಹಾಳಾದ ಹಲ್ಲನ್ನು ಸರಿಪಡಿಸುತ್ತದೆ.

Eat these fruits to keep your teeth looking bright


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...