Kannada Duniya

ನಿಮಗೆ ನೀರು ಕುಡಿಯಲು ನೆನಪಾಗದಿದ್ದರೆ ಈ ಸಲಹೆ ಪಾಲಿಸಿ

ದೇಹ ಆರೋಗ್ಯವಾಗಿರಲು ಸಾಕಷ್ಟು ನೀರನ್ನು ಕುಡಿಯಬೇಕು. ಇಲ್ಲವಾದರೆ ಹಲವಾರು ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಹಾಗೇ ಬೇಸಿಗೆ ಕಾಲದಲ್ಲಿ ದೇಹಕ್ಕೆ ನೀರಿನ ಅವಶ್ಯಕತೆ ತುಂಬಾ ಇರುತ್ತದೆ. ಅದಕ್ಕಾಗಿ ಆಗಾಗ ನೀರು ಕುಡಿಯುತ್ತಿರಬೇಕು. ಆದರೆ ಕೆಲವರಿಗೆ ನೀರು ಕುಡಿಯಲು ನೆನೆಪಾಗುವುದಿಲ್ಲ. ಅಂತವರು ಈ ಸಲಹೆ ಪಾಲಿಸಿ.

ನೀವು ಹೊರಗಡೆ ಹೋಗುವಾಗ ನೀರು ಕುಡಿಯಲು ಸಾಧ್ಯವಾಗುವುದಿಲ್ಲ. ಹಾಗಾಗಿ ನಿಮ್ಮ ಜೊತೆ ನೀರಿನ ಬಾಟಲಿಯನ್ನು ತೆಗೆದುಕೊಂಡು ಹೋಗಿ. ಇದರಿಂದ ನಿಮಗೆ ನೀರು ಕುಡಿಯಲು ನೆನಪಾಗುತ್ತದೆ.

ಹಾಗೇ ನೀರು ಕುಡಿಯಲು ನೆನಪಾಗದವರು ಫೋನ್ ನಲ್ಲಿ ಅಲರಂ ಅನ್ನು ಸೆಟ್ ಮಾಡಿಕೊಳ್ಳಿ. ಇದು ನಿಮಗೆ ಕಿರಿಯನ್ನುಂಟುಮಾಡಿದರೂ ಕೂಡ ಒಳ್ಳೆಯದು.
ನಿಮಗೆ ನೀರು ರುಚಿ ಇಲ್ಲ ಎಂದು ಅನಿಸಿದರೆ ನಿಂಬೆ ಪುದೀನಾದಂತಹ ವಸ್ತುಗಳನ್ನು ಬೆರೆಸಿದ ನೀರನ್ನು ಕುಡಿಯಿರಿ. ಇದು ಸುಗಂಧಯುತವಾಗಿರುತ್ತದೆ. ಮತ್ತು ಹಣ್ಣು ಮತ್ತು ತರಕಾರಿಯ ಜ್ಯೂಸ್ ಕುಡಿಯಿರಿ. ಇದು ರುಚಿಕರವಾಗಿರುತ್ತದೆ ಮತ್ತು ಮತ್ತೆ ಮತ್ತೆ ಕುಡಿಯಬೇಕೆನಿಸುತ್ತದೆ.

ಹಾಗೇ ಬೆಳಿಗ್ಗೆ ಎದ್ದಾಗ ನೀರು ಕುಡಿಯುವುದು, ಊಟಕ್ಕೆ ಅರ್ಧ ಗಂಟೆ ಮೊದಲು ನೀರು ಕುಡಿಯುವುದು, ಊಟದ ಅರ್ಧ ಗಂಟೆ ನಂತರ ನೀರು ಕುಡಿಯುವಂತಹ ಅಭ್ಯಾಸವನ್ನು ರೂಢಿಸಿಕೊಳ್ಳಿ


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...