Kannada Duniya

ತಿಂಡಿಗೆ ಮಾಡಿ ರುಚಿಯಾದ ಟೊಮ್ಯಾಟೊ ರೈಸ್…!

ಬೇಕಾಗುವ ಪದಾರ್ಥಗಳು:
ಅಕ್ಕಿ – ಎರಡು ಕಪ್‌
ಈರುಳ್ಳಿ- 1(ಹೆಚ್ಚಿದ್ದು) ಟೊಮೇಟೊ – ನಾಲ್ಕು (ಹೆಚ್ಚಿಟ್ಟದ್ದು)
ಬಟಾಣಿ ಕಾಳುಗಳು – ಐದು ಟೇಬಲ್ ಚಮಚಗಳಷ್ಟು ಹಸಿಮೆಣಸಿನಕಾಯಿ – 3
ಶುಂಠಿ ಹಾಗೂ ಬೆಳ್ಳುಳ್ಳಿಯ ಪೇಸ್ಟ್ – 1 ಟೇಬಲ್ ಚಮಚದಷ್ಟು
ಕೆಂಪು ಮೆಣಸಿನ ಪುಡಿ – 1 ಟೇಬಲ್ ಚಮಚ
ಅರಿಶಿನ ಪುಡಿ – ಅರ್ಧ ಟೇಬಲ್ ಚಮಚ
ಟೊಮೇಟೊ ಸಾಸ್ – 1 ಟೇಬಲ್ ಚಮಚ
ಉಪ್ಪು – ರುಚಿಗೆ ತಕ್ಕಷ್ಟು ನೀರು – ಎರಡು ಕಪ್‌
ತುಪ್ಪ – ಎರಡು ಟೇಬಲ್ ಚಮಚ

ಮಾಡುವ ವಿಧಾನ:

ಕುಕ್ಕರ್‌ನಲ್ಲಿ ತುಪ್ಪವನ್ನು ಹಾಕಿರಿ. ತುಪ್ಪವು ಬಿಸಿಯಾಗುವವರೆಗೆ ಬಿಡಿ. ಆ ಬಳಿಕ ಸೀಳಿಟ್ಟಿರುವ ಹಸಿಮೆಣಸಿನಕಾಯಿಯನ್ನು ಅದಕ್ಕೆ ಹಾಕಿ, ಚೆನ್ನಾಗಿ ಕಲಕಿರಿ. ಈಗ ಹೆಚ್ಚಿಟ್ಟಿರುವ ಈರುಳ್ಳಿಯ ಚೂರುಗಳನ್ನು ಅದಕ್ಕೆ ಸೇರಿಸಿ, ಅವು  ಕಂದು ಬಣ್ಣಕ್ಕೆ ತಿರುಗುವವರೆಗೂ ಅವನ್ನು ಚೆನ್ನಾಗಿ ತಿರುವಿರಿ

ಟೊಮೇಟೊವನ್ನು ಇದಕ್ಕೆ ಸೇರಿಸಿರಿ ಹಾಗೂ ಬಳಿಕ ಚೆನ್ನಾಗಿ ಕಲಕಿರಿ. ಟೊಮೇಟೊ ಐದು ನಿಮಿಷಗಳ ಕಾಲ ಚೆನ್ನಾಗಿ ಬೇಯಲಿ. ಈಗ ಶುಂಠಿ-ಬೆಳ್ಳುಳ್ಳಿಯ ಪೇಸ್ಟ್, ಅರಿಶಿನ ಪುಡಿ, ಹಾಗೂ ಕೆಂಪು ಮೆಣಸಿನ ಪುಡಿಗಳನ್ನು ಸೇರಿಸಿರಿ. ಇವೆಲ್ಲವನ್ನೂ ಚೆನ್ನಾಗಿ ಕಲಕಿರಿ.

ತದನಂತರ ಬಟಾಣಿ ಕಾಳುಗಳನ್ನು ಕುಕ್ಕರ್‌ನಲ್ಲಿ ಹಾಕಿರಿ. ಈ ಬಟಾಣಿ ಕಾಳುಗಳು ಇತರ ಸಾಮಗ್ರಿಗಳೊ೦ದಿಗೆ ಸುಮಾರು ನಾಲ್ಕರಿ೦ದ ಐದು ನಿಮಿಷಗಳವರೆಗೆ ಬೇಯಲಿ. ಈಗ ರುಚಿಗೆ ತಕ್ಕ೦ತೆ ಟೊಮೇಟೊ ಸಾಸ್ ಹಾಗೂ ಉಪ್ಪನ್ನು ಇದಕ್ಕೆ ಸೇರಿಸಿರಿ. ಈ ಎಲ್ಲಾ ಸಾಮಗ್ರಿಗಳೂ ಕೂಡಾ ಆರು ನಿಮಿಷಗಳವರೆಗೆ ಚೆನ್ನಾಗಿ ಬೇಯಲಿ.

Foods for Thyroid: ಥೈರಾಯ್ಡ್ ಸಮಸ್ಯೆಯಿದ್ದರೆ ಈ ಆಹಾರಗಳನ್ನು ಸೇವಿಸಿ…!

ಈಗ ತೊಳೆದಿಟ್ಟಿರುವ ಅಕ್ಕಿಯನ್ನು ಕುಕ್ಕರ್‌ನಲ್ಲಿ ಹಾಕಿರಿ. ಅಕ್ಕಿಯನ್ನು ಇತರ ಸಾಮಗ್ರಿಗಳೊ೦ದಿಗೆ ಚೆನ್ನಾಗಿ ಫ್ರೈ ಮಾಡಿರಿ. ಕುಕ್ಕರ್‌ಗೆ ಈಗ ನೀರನ್ನು ಸೇರಿಸಿ ಅದರ ಸಾಮಗ್ರಿಗಳನ್ನು ಅ೦ತಿಮವಾಗಿ ಒಮ್ಮೆ ಚೆನ್ನಾಗಿ ಕಲಕಿರಿ. ಕುಕ್ಕರ್‌ನ ಮುಚ್ಚಳವನ್ನು ಮುಚ್ಚಿರಿ. ನಾಲ್ಕು ಸೀಟಿಗಳು ಮೊಳಗುವವರೆಗೆ ಕಾಯಿರಿ. ಇಷ್ಟಾದರೆ ಟೊಮೆಟೊ ರೈಸ್ ಸವಿಯಲು ಸಿದ್ದ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...