Kannada Duniya

ಸಾಂಬ್ರಾಣಿ ಗಡ್ಡೆ ಪಲ್ಯ ಮಾಡುವ ಸುಲಭ ವಿಧಾನ ಹೀಗಿದೆ ನೋಡಿ

ಸಾಂಬ್ರಾಣಿ ಗಡ್ಡೆ/ಚೈನೀಸ್ ಪೊಟೆಟೊ ಇದರ ಪಲ್ಯ ತಿನ್ನುವುದಕ್ಕೆ ತುಂಬಾನೇ ರುಚಿಯಾಗಿರುತ್ತದೆ. ಇದನ್ನು ಮಾಡುವ ವಿಧಾನ ಕೂಡ ಸುಲಭವಿದೆ. ಬಿಸಿ ಬಿಸಿ ಅನ್ನದ ಜೊತೆ ಇದರ ಪಲ್ಯ ತುಂಬಾನೇ ಸಖತ್ ಆಗಿರುತ್ತದೆ.

ಬೇಕಾಗುವ ಸಾಮಗ್ರಿಗಳು

ಸಾಂಬ್ರಾಣಿ ಗಡ್ಡೆಯ ಸಿಪ್ಪೆ ತೆಗೆದು ಚೆನ್ನಾಗಿ ತೊಳೆದು ಚಿಕ್ಕದಾಗಿ ಕತ್ತರಿಸಿಕೊಳ್ಳಿ.1 ದೊಡ್ಡ ಈರುಳ್ಳಿಯನ್ನು ಕತ್ತರಿಸಿಟ್ಟುಕೊಳ್ಳಿ.ನಂತರ ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ 1 ಚಮಚ ಎಣ್ಣೆ ಹಾಕಿ ಅದಕ್ಕೆ 8 ಒಣಮೆಣಸು ಹಾಕಿ ಚೆನ್ನಾಗಿ ಹುರಿದು ತೆಗೆದುಕೊಳ್ಳಿ. ನಂತರ ¼ ಟೀ ಸ್ಪೂನ್ ಸಾಸಿವೆ ಹಾಕಿ ಅದು ಸಿಡಿದ ಬಳಿಕ 1 ಚಮಚ ಧನಿಯಾ, 1 ಚಮಚ ಜೀರಿಗೆ  ಹಾಕಿ ಹುರಿದು 2 ಏಲಕ್ಕಿ, 2 ಲವಂಗ, 1 ಇಂಚು ಚಕ್ಕೆ, 5 ಕಾಳುಮೆಣಸು ಹಾಕಿ ಹುರಿದುಕೊಳ್ಳಿ. ನಂತರ ಇವೆಲ್ಲವನ್ನೂ ಮಿಕ್ಸಿ ಜಾರಿಗೆ ಹಾಕಿ ಮೆಣಸು ಸೇರಿಸಿ, ಸಣ್ಣ ತುಂಡು ಹುಣಸೆ ಹಣ್ಣು ಸೇರಿಸಿ ಪುಡಿ ಮಾಡಿಕೊಳ್ಳಿ.

ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ 2 ಚಮಚ ಎಣ್ಣೆ ಹಾಕಿ ಕತ್ತರಿಸಿದ ಈರುಳ್ಳಿ, 2 ದಂಟು ಕರಿಬೇವು ಹಾಕಿ ಫ್ರೈ ಮಾಡಿ. ನಂತರ ಕತ್ತರಿಸಿದ ಸಾಂಬ್ರಾಣಿ ಹಾಕಿ ಚೆನ್ನಾಗಿ ಫ್ರೈ ಮಾಡಿ. ಇದಕ್ಕೆ ಚಿಟಿಕೆ ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ನಂತರ ಸಾಂಬ್ರಾಣಿ ಬೇಯಲು ಬಿಡಿ. ಬಳಿಕ 2 ಚಮಚ ಮಸಾಲೆ ಪುಡಿಯನ್ನು ಹಾಕಿ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ  ಇನ್ನೊಂದು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ 8 ಎಸಳು ಬೆಳ್ಳುಳ್ಳಿ, 1 ಈರುಳ್ಳಿ ಹಾಕಿ, ಸ್ವಲ್ಪ ಕರಿಬೇವು ಸೇರಿಸಿ ಫ್ರೈ ಮಾಡಿ. ನಂತರ ½ ಇಂಚು ಶುಂಠಿಯನ್ನು ಕತ್ತರಿಸಿ ಹಾಕಿ ½ ಕಪ್ ತೆಂಗಿನಕಾಯಿ ತುರಿಯನ್ನು ಸೇರಿಸಿ ಫ್ರೈ ಮಾಡಿಕೊಂಡು ಒಂದು ಮಿಕ್ಸಿ ಜಾರಿಗೆ ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಿ. ನಂತರ ಬೆಂದ ಸಾಂಬ್ರಾಣಿಗೆ ತುಸು ನೀರು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ ರುಬ್ಬಿದ ತೆಂಗಿನಕಾಯಿ ತುರಿಯನ್ನು ಮಿಕ್ಸ್ ಮಾಡಿದರೆ ರುಚಿಯಾದ ಸಾಂಬ್ರಾಣಿ ಪಲ್ಯ ಸವಿಯಲು ಸಿದ್ಧ.

 

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...