Kannada Duniya

ಮಂಗಳೂರು ಶೈಲಿಯ ಮಟನ್ ಸುಕ್ಕ ಮಾಡುವ ವಿಧಾನ

ಮಟನ್ ಸಾರು ಅಥವಾ ಸುಕ್ಕ ಇದ್ದರೆ ಮಾಂಸಾಹಾರ ಪ್ರಿಯರಿಗೆ ತುಂಬ ಖುಷಿಯಾಗುತ್ತದೆ. ಇಲ್ಲಿ ಸುಲಭವಾಗಿ ಮಾಡಬಹುದಾದ ಮಟನ್ ಸುಕ್ಕದ ವಿಧಾನವಿದೆ. ಇದು ತಿನ್ನುವುದಕ್ಕೆ ತುಂಬಾ ರುಚಿಕರವಾಗಿರುತ್ತದೆ.ಅನ್ನದ ಜೊತೆ ಇದು ಸಖತ್ ಆಗಿರುತ್ತದೆ.

ಬೇಕಾಗುವ ಸಾಮಗ್ರಿಗಳು

1 ಕೆಜಿ ಮಟನ್, 2-ಈರುಳ್ಳಿ, 1-ಟೊಮ್ಯಾಟೊ, 2 ಟೇಬಲ್ ಸ್ಪೂನ್- ಶುಂಠಿ ಬೆಳ್ಳುಳ್ಳಿ ಪೇಸ್ಟ್, 5-ಲವಂಗ, 1 ಇಂಚು-ಚಕ್ಕೆ, 4 –ಹಸಿಮೆಣಸು, ½ ಕಪ್- ತೆಂಗಿಕಾಯಿ ತುರಿ, ½ ಕಪ್- ಕೊತ್ತಂಬರಿಸೊಪ್ಪು, 1 ಟೀ ಸ್ಪೂನ್- ಉಪ್ಪು, 6 ಟೇಬಲ್ ಸ್ಪೂನ್- ತೆಂಗಿನೆಣ್ಣೆ, ಟೀ ಸ್ಪೂನ್- ಸಾಸಿವೆ, 5-ಒಣಮೆಣಸು, 1 ಟೀ ಸ್ಪೂನ್- ಜೀರಿಗೆ, 1 ಟೇಬಲ್ ಸ್ಪೂನ್- ಧನಿಯಾ ಬೀಜ, 4 ಎಸಳು-ಲವಂಗ, 1 ಇಂಚು-ಚಕ್ಕೆ, 8 –ಕಾಳುಮೆಣಸು, 1 –ಈರುಳ್ಳಿ, 3 ಎಸಳು-ಬೆಳ್ಳುಳ್ಳಿ, 1 ಟೇಬಲ್ ಸ್ಪೂನ್ ಹುಣಸೆಹಣ್ಣಿನ ರಸ- ¼ ಕಪ್, 1 ಟೇಬಲ್ ಸ್ಪೂನ್-ಎಣ್ಣೆ.

ಮಾಡುವ ವಿಧಾನ

ಒಲೆಯ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ 1 ಟೇಬಲ್ ಸ್ಪೂನ್ ಎಣ್ಣೆ ಹಾಕಿ ಒಣಮೆಣಸು, ಧನಿಯಾ ಬೀಜ, ಜೀರಿಗೆ, ಸಾಸಿವೆ, ಲವಂಗ, ಚಕ್ಕೆ, ಕಾಳುಮೆಣಸು ಸೇರಿಸಿ 3 ನಿಮಿಷಗಳ ಕಾಲ ಫ್ರೈ ಮಾಡಿ. ನಂತರ ಇದನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ಅದಕ್ಕೆ 1 ಈರುಳ್ಳಿ, 3 ಬೆಳ್ಳುಳ್ಳಿ ಎಸಳು, ಹುಣಸೆಹಣ್ಣಿನ ರಸ, ಸ್ವಲ್ಪ ನೀರು ಸೇರಿಸಿ ನಯವಾಗಿ ರುಬ್ಬಿಕೊಳ್ಳಿ. ನಂತರ ಒಲೆಯ ಮೇಲೆ ಕುಕ್ಕರ್ ಇಟ್ಟು ಅದಕ್ಕೆ 5 ಚಮಚ ಎಣ್ಣೆ ಹಾಕಿ 5 ಲವಂಗ, ಚಕ್ಕೆ ತುಂಡು, 2 ಈರುಳ್ಳಿಯನ್ನು ಕತ್ತರಿಸಿ ಹಾಕಿ 1 ನಿಮಿಷಗಳ ಕಾಲ ಫ್ರೈ ಮಾಡಿ. ನಂತರ 1 ಟೇಬಲ್ ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕತ್ತರಿಸಿದ ಟೊಮ್ಯಾಟೊ, ಹಸಿಮೆಣಸು ಸೇರಿಸಿ ಫ್ರೈ ಮಾಡಿ. ನಂತರ ಇದಕ್ಕೆ ಮಟನ್ ಮಾಂಸವನ್ನು ಹಾಕಿ ತುಸು ಉಪ್ಪು ಸೇರಿಸಿ 1 ನಿಮಿಷಗಳ ಕಾಲ ಹುರಿದುಕೊಳ್ಳಿ. ನಂತರ ಸ್ವಲ್ಪ ನೀರು ಸೇರಿಸಿ 4 ವಿಷಲ್ ಕೂಗಿಸಿಕೊಳ್ಳಿ. ನಂತರ ಇದಕ್ಕೆ ರುಬ್ಬಿದ ಮಸಾಲೆಯನ್ನು ಹಾಕಿ 10 ನಿಮಿಷಗಳ ಕಾಲ ಬೇಯಸಿಕೊಳ್ಳಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಕೊನೆಗೆ ತೆಂಗಿನಕಾಯಿ ತುರಿ, ಕೊತ್ತಂಬರಿಸೊಪ್ಪು ಸೇರಿಸಿ ಸರ್ವ್ ಮಾಡಿ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...