Kannada Duniya

ಅಡುಗೆ ಮನೆಯಲ್ಲಿ ಕೆಲಸವನ್ನು ಸುಲಭಗೊಳಿಸಲು ಈ ತಂತ್ರಗಳನ್ನು ಬಳಸಿ…!

ಮಹಿಳೆಯರು ಅಡುಗೆ ಮನೆಯಲ್ಲಿ ಕೆಲವು ತಂತ್ರಗಳನ್ನು ಬಳಸುವ ಮೂಲಕ ಕೆಲಸವನ್ನು ಸುಲಭವಾಗಿಸಬಹುದು. ಹಾಗೇ ಕೆಲವು ತಂತ್ರಗಳಿಂದ ಆಹಾರದ ಪೌಷ್ಟಿಕಾಂಶವನ್ನು ಉಳಿಸಬಹುದು. ಇದನ್ನು ಸೇವಿಸಿದರೆ ಆರೋಗ್ಯಕ್ಕೆ ಉತ್ತಮ. ಹಾಗಾಗಿ ನಿಮ್ಮ ಕೆಲಸಗಳನ್ನು ಸುಲಭಗೊಳಿಸಲು ಮತ್ತು ಆಹಾರವನ್ನು ರುಚಿಯಾಗಿಸಲು ಕೆಲವು ತಂತ್ರಗಳನ್ನು ಪಾಲಿಸಿ.

-ಈರುಳ್ಳಿಯನ್ನು ಅಡುಗೆಗೆ ಬಳಸುವಾಗ ಬೇರಿನ ಭಾಗವನ್ನು ತೆಗೆದುಹಾಕಿ. ನಂತರ ಈರುಳ್ಳಿಯನ್ನು ಕತ್ತರಿಸಿ ಬಾಣಲೆಯಲ್ಲಿ ಎಣ್ಣೆ ಹಾಕಿ ಫ್ರೈ ಮಾಡುವಾಗ ಕಡಿಮೆ ಉರಿಯಲ್ಲಿ ಬೇಯಿಸಬೇಡಿ. ಇದರಿಂದ ಈರುಳ್ಳಿ ಎಣ್ಣೆಯನ್ನು ಹೀರಿಕೊಳ್ಳುತ್ತದೆ.

Raw onion smell on breath: ಹಸಿ ಈರುಳ್ಳಿ ವಾಸನೆ ತೆಗೆದು ಹಾಕುವುದು ಹೇಗೆ…?

-ಹಾಗೇ ಬದನೆಕಾಯಿಯನ್ನು ರುಚಿಕರವಾಗಿಸಲು ಅದನ್ನು ಹುರಿಯಬೇಕು ಮತ್ತು ಅದರಲ್ಲಿರುವ ಬೀಜಗಳನ್ನು ತೆಗೆದುಹಾಕಿ. ಇದರಿಂದ ಬದನೆಕಾಯಿಯ ಅಡುಗೆ ರುಚಿಕರವಾಗಿರುತ್ತದೆ.

-ಬಾಣಲೆಯಲ್ಲಿ ಅಕ್ಕಿ ಮತ್ತು ನೂಡಲ್ಸ್ ಅನ್ನು ಹಾಕಿ ಬೇಯಿಸುವಾಗ ಅದು ಬಾಣಲೆಗೆ ಅಂಟಿಕೊಳ್ಳುತ್ತದೆ. ಇದನ್ನು ತಪ್ಪಿಸಲು ಮೊದಲು ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಿ. ನಂತರ ಅಕ್ಕಿ ಮತ್ತು ನೂಡಲ್ಸ್ ಅನ್ನು ಹಾಕಿ ಬೇಯಿಸಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...