Kannada Duniya

ಈ ಯೋಗ ಮಾಡುವುದರಿಂದ ಹೆರಿಗೆ ಸುಲಭವಾಗುತ್ತದೆ ಮತ್ತು ಮಗು ಆರೋಗ್ಯವಾಗಿರುತ್ತದೆಯಂತೆ…!

ಗರ್ಭಾವಸ್ಥೆಯಲ್ಲಿ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು. ಇಲ್ಲವಾದರೆ ಅದರ ಪರಿಣಾಮ ಮಗುವಿನ ಮೇಲಾಗುತ್ತದೆ. ಹಾಗಾಗಿ ನೀವು ಗರ್ಭಾವಸ್ಥೆಯಲ್ಲಿ ಈ ಯೋಗ ಅಭ್ಯಾಸ ಮಾಡಿ. ಇದರಿಂದ ಹೆರಿಗೆ ಸುಲಭವಾಗುತ್ತದೆಯಂತೆ ಮತ್ತು ಮಗುವು ಆರೋಗ್ಯವಾಗಿರುತ್ತದೆಯಂತೆ.

ಗರ್ಭಾವಸ್ಥೆಯಲ್ಲಿ ನೀವು ಉಸಿರಾಟಕ್ಕೆ ಸಂಬಂಧಿಸಿದ ಯೋಗ ಅಭ್ಯಾಸ ಮಾಡಿ. ಯಾವಾಗಲೂ ಆಳವಾದ ಉಸಿರನ್ನು ತೆಗೆದುಕೊಳ್ಳಿ. ಮತ್ತು ಅದನ್ನು ನಿಧಾನವಾಗಿ ಬಿಡಿ. ಉಸಿರಾಡುವಾಗ ನಿಮ್ಮ ಶ್ವಾಸಕೋಶಗಳು ಹಿಗ್ಗಬೇಕು ಮತ್ತು ಬಿಡುವಾಗ ನಿಮ್ಮ ಹೊಟ್ಟೆ ಒಳಮುಖವಾಗಿ ಚಲಿಸಬೇಕು.

Yoga for acidity: ಆಮ್ಲೀಯತೆ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರು ಈ ಯೋಗಾಸನಗಳನ್ನು ಪ್ರಯತ್ನಿಸಿ…!

ಈ ಉಸಿರಾಟ ಪ್ರಕ್ರಿಯೆಯು ನಿಮ್ಮ ಶ್ವಾಸಕೋಶವನ್ನು ಬಲಪಡಿಸುತ್ತದೆ. ಇದು ನಿಮ್ಮ ದೇಹದಲ್ಲಿ ಆಮ್ಲಜನಕದ ಮಟ್ಟವನ್ನು ಹೆಚ್ಚಿಸುತ್ತದೆ. ಮತ್ತು ರಕ್ತ ಹರಿವನ್ನು ಉತ್ತಮವಾಗಿಸುತ್ತದೆ. ನಿಮ್ಮ ರಕ್ತದೊತ್ತಡ ಸರಿಯಾಗಿರುತ್ತದೆ. ಮಗುವು ಆರೋಗ್ಯವಾಗಿ ಬೆಳೆಯುತ್ತದೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...