Kannada Duniya

ಗರ್ಭ ಧರಿಸುವ ಮುನ್ನ ಈ ಕ್ರಮವನ್ನು ತಪ್ಪದೇ ಪಾಲಿಸಿ!

ಗರ್ಭ ಧರಿಸುವುದು ಎಂದರೆ ಸುಲಭವಾದ ಪ್ರಕ್ರಿಯೆ ಅಲ್ಲ.ಆದಷ್ಟು ಎಚ್ಚರಿಕೆಯಿಂದ ಇರಬೇಕು.  ಕೆಲವೊಂದು ವಿಧಾನವನ್ನು ಪಾಲಿಸಿದರೆ ಯಾವುದೇ ತೊಂದರೆ ಇಲ್ಲದೇ ಗರ್ಭಧರಿಸಬಹುದು. ಈಗಿನ ಜೀವನಶೈಲಿ, ಆಹಾರದಿಂದ ಸಾಕಷ್ಟು ಮಂದಿ ಗರ್ಭಧಾರಣೆ ಸಮಸ್ಯೆ ಎದುರಿಸುತ್ತಿದ್ದಾರೆ. ನೀವು ಗರ್ಭ ಧರಿಸುವ ಯೋಜನೆ ಹಾಕಿಕೊಂಡಿದ್ದರೆ ಈ ಕೆಲವು ವ್ಯಾಯಾಮಗಳನ್ನು ನಿತ್ಯ ಮಾಡುತ್ತಾ ಬನ್ನಿ. ಸುರಕ್ಷಿತವಾದ ಈ ವ್ಯಾಯಾಮಗಳು ಯಾವುವು ಎಂಬುದಕ್ಕೆ ಇಲ್ಲಿದೆ ನೋಡಿ ಮಾಹಿತಿ.

ಆರೋಗ್ಯಕರ ತೂಕ ಹಾಗೂ ಸದಾ ಚಟುವಟಿಕೆಯಿಂದ ಇರುವುದು ಎಲ್ಲಾ ರೀತಿಯಿಂದಲೂ ಒಳ್ಳೆಯದು. ಅದರಲ್ಲೂ ಏರೋಬಿಕ್ ವ್ಯಾಯಾಮಗಳು ತೂಕ ನಿರ್ವಹಣೆ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ. ಮೂಳೆಗಳು ಮತ್ತು ಸ್ನಾಯುಗಳನ್ನು ಬಲಪಡಿಸುತ್ತದೆ.

ದೀರ್ಘನಡಿಗೆ ಸ್ನಾಯುಗಳ ಆರೋಗ್ಯವನ್ನು ಬಲಪಡಿಸಿ, ಮೂಳೆಗಳನ್ನು ಸದೃಢಗೊಳಿಸುತ್ತದೆ. ಹಾಗಾಗಿ ಇದನ್ನು ಹವ್ಯಾಸವಾಗಿ ರೂಢಿಸಿಕೊಳ್ಳಿ. ಗರ್ಭ ಧರಿಸಬೇಕು ಎಂದುಕೊಂಡಿರುವವರು ಹೆಚ್ಚು ಸೈಕ್ಲಿಂಗ್ ಮಾಡುವುದು ಒಳ್ಳೆಯದಲ್ಲ.

ಪ್ರಾಣಾಯಾಮ ಹಾಗೂ ಯೋಗ ಗರ್ಭಧರಿಸಲು ನೆರವಾಗುತ್ತದೆ. ಮಲಗಿ ಕಾಲುಗಳನ್ನು ಗೋಡೆಗೆ ಒರಗಿಸಿ, ಬಳಿಕ ಮುಂದಕ್ಕೆ ಚಾಚಿ, ಕ್ರಮೇಣ ಕೆಳಗಿಳಿಸಿ. ನೆನಪಿರಲಿ ಹೆಚ್ಚು ಶ್ರಮಪಡುವ ಯೋಗಮಾಡದಿರಿ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...