Kannada Duniya

ಮುಟ್ಟಿನ ನೋವನ್ನು ನಿವಾರಿಸಲು ಈ ಯೋಗಾಸವನ್ನು ಅಭ್ಯಾಸ ಮಾಡಿ

ಮಹಿಳೆಯರಿಗೆ ಪ್ರತಿ ತಿಂಗಳು ಮುಟ್ಟಾಗುತ್ತದೆ. ಆದರೆ ಕೆಲವು ಮಹಿಳೆಯರಲ್ಲಿ ಹೊಟ್ಟೆಯ ನೋವು ಕಂಡುಬರುತ್ತದೆ. ಇದರಿಂದ ಅವರಿಗೆ ಏನನ್ನೂ ತಿನ್ನಲು , ಕುಡಿಯಲು ಆಗುವುದಿಲ್ಲ, ವಾಂತಿ ಸಮಸ್ಯೆ ಕಾಡುತ್ತದೆ. ಹಾಗಾಗಿ ಮುಟ್ಟಿನ ನೋವನ್ನು ನಿವಾರಿಸಲು ಈ ಯೋಗಾಸವನ್ನು ಅಭ್ಯಾಸ ಮಾಡಿ.

ಬಾಲಾಸನ : ನೆಲದ ಮೇಲೆ ಮಂಡಿಯೂರಿ ಕುಳಿತುಕೊಳ್ಳಿ. ನಿಮ್ಮ ಮೊಣಕಾಲನ್ನು ಸೊಂಟಕ್ಕಿಂತ ಅಂಗಲವಾಗಿಸಿ ಮುಂದಕ್ಕೆ ಬಾಗಿ ನಿಮ್ಮ ತಲೆಯನ್ನು ನೆಲದ ಮೇಲೆ ಇರಿಸಿ. ಈ ಸ್ಥಾನದಲ್ಲಿ ಕೆಲವು ಸೆಕೆಂಡುಗಳ ಕಾಲ ಹಿಡಿದುಕೊಳ್ಳಿ.

ಬಡ್ಡಕೋನಾಸನ : ನೀವು ಕುಳಿತುಕೊಂಡು ನಿಮ್ಮ ಪಾದಗಳನ್ನು ಬಿಗಿಯಾಗಿ ಹಿಡಿದುಕೊಳ್ಳಿ, ನಿಮ್ಮ ಪಾದಗಳು ಚಲಿಸದೆ ನಿಮ್ಮ ತೊಡೆಗಳನ್ನು ಮಾತ್ರ ಮೇಲಕ್ಕೆ ಮತ್ತು ಕೆಳಕ್ಕೆ ಬೀಸಲು ಪ್ರಾರಂಭಿಸಿ. ಇದನ್ನು ಒಂದೆರಡು ನಿಮಿಷ ಮಾಡಿ.

ಸೇತುಬಂಧಾಸನ : ನೀವು ಬೆನ್ನಿನ ಮೇಲೆ ಮಲಗಿ ನಿಮ್ಮ ಪಾದಗಳನ್ನು ನೆಲದ ಮೇಲೆ ಚಪ್ಪಟೆ ಮಾಡಿ ನಿಮ್ಮ ಕುತ್ತಿಗೆ ಮತ್ತು ನಿಮ್ಮ ತಲೆ ಚಾಪೆಯ ಮೇಲೆ ಚಪ್ಪಟೆಯಾಗಿರುವಂತೆ ನಿಮ್ಮ ದೇಹವನ್ನು ಮೇಲಕ್ಕೆತ್ತಿ. ನಿಮ್ಮ ಕೈಗಳನ್ನು ಬೆನ್ನಿನ ಕೆಳಗೆ ಇಡಬಹುದು.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...