Kannada Duniya

ಗರ್ಭಪಾತದ ಬಳಿಕ ಈ ರೀತಿಯಾಗಿ ಆರೋಗ್ಯದ ಕಾಳಜಿ ಮಾಡಿ!

ಗರ್ಭಧಾರಣೆ ನೀಡುವ ಸಂತೋಷದ ಹತ್ತರಷ್ಟು ಪಾಲು ನೋವನ್ನು ಗರ್ಭಪಾತ ನೀಡುತ್ತದೆ. ಸಾಮಾನ್ಯವಾಗಿ ಇದನ್ನು ಯಾವ ತಾಯಿಯೂ ಬಯಸುವುದಿಲ್ಲ. ಅನಿವಾರ್ಯವಾಗಿ ಗರ್ಭಪಾತವಾದ ಬಳಿಕ ಮಹಿಳೆಯರು ಯಾವ ರೀತಿ ತಮ್ಮನ್ನು ಆರೈಕೆ ಮಾಡಿಕೊಳ್ಳಬಹುದು ಎಂಬುದಕ್ಕೆ ಇಲ್ಲೊಂದಿಷ್ಟು ಟಿಪ್ಸ್ ಇದೆ ನೋಡಿ.
ಗರ್ಭಪಾತವಾದ ಬಳಿಕ ಮಾನಸಿಕವಾಗಿ ಕುಸಿಯುವುದು ಸಹಜ. ಇಂಥ ಸಂದರ್ಭದಲ್ಲಿ ಸಾಕಷ್ಟು ವಿಶ್ರಾಂತಿ ಪಡೆದುಕೊಳ್ಳುವುದರ ಜೊತೆಗೆ ನಿಮ್ಮ ನೆಚ್ಚಿನ ಹವ್ಯಾಸಗಳಲ್ಲಿ ತೊಡಗಿಕೊಳ್ಳಿ ಹಾಗೂ ಪ್ರೀತಿ ಪಾತ್ರರ ಜೊತೆ ಸಮಯ ಕಳೆಯಿರಿ. ಇದು ನಿಮ್ಮ ನೋವು ಹಾಗೂ ಬೇಸರಗಳನ್ನು ಕಡಿಮೆ ಮಾಡುತ್ತದೆ.
ವೈದ್ಶರು ಶಿಫಾರಸು ಮಾಡಿದ ಔಷಧಗಳನ್ನು ಸಮಯಕ್ಕೆ ಸರಿಯಾಗಿ ತಿಳಿದುಕೊಳ್ಳಲು ಮರೆಯದಿರಿ ಏಕೆಂದರೆ ಈ ಅವಧಿಯಲ್ಲಿ ಇದು ನಿಮ್ಮ ದೇಹಕ್ಕೆ ಅತ್ಯಗತ್ಯವಾಗಿರಬಹುದು.
ಅದೇ ರೀತಿ ಶಸ್ತ್ರ ಚಿಕಿತ್ಸೆಯ ಮೂಲಕ ನೀವು ಗರ್ಭಪಾತವನ್ನು ಹೊಂದಿದ್ದರೆ ಇನ್ನೂ ಹೆಚ್ಚಿನ ಆರೈಕೆ ಅಗತ್ಯವಿರುತ್ತದೆ. ಯಾವುದೇ ಒತ್ತಡಗಳಿಗೆ ಒಳಗಾಗದೆ ವಿಶ್ರಾಂತಿ ಪಡೆಯುವುದು ಬಹಳ ಮುಖ್ಯ.
ಹೀಗಿದ್ದು ಹೊಟ್ಟೆ ನೋವು ಅಥವಾ ರಕ್ತಸ್ರಾವ ಮುಂದುವರಿದರೆ ವೈದ್ಯರ ಸಲಹೆ ಪಡೆಯುವುದನ್ನು ಮರೆಯದಿರಿ. ವೈದ್ಯರು ಸೂಚಿಸಿದ ಆಹಾರ ಪದ್ಧತಿಯನ್ನು ಅನುಸರಿಸಿ.

Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...