Kannada Duniya

ಬಾಳೆಹಣ್ಣಿನ ಸೇವನೆಯಿಂದ ಪಿಸಿಓಎಸ್ ಸಮಸ್ಯೆಯನ್ನು ನಿವಾರಿಸಬಹುದೇ?

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರು ಪಿಸಿಓಎಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರಿಂದ ಅವರಲ್ಲಿ ಅನಿಯಮಿತ ಮುಟ್ಟಿನ ಸಮಸ್ಯೆ, ಅಧಿಕ ರಕ್ತಸ್ರಾವ, ಹೊಟ್ಟೆನೋವು, ಸೆಳೆತ ಮುಂತಾದ ಸಮಸ್ಯೆಗಳು ಕಾಡುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಬಾಳೆಹಣ್ಣು ಪ್ರಯೋಜನಕಾರಿಯೇ ಎಂಬುದನ್ನು ತಿಳಿಯಿರಿ.

ಬಾಳೆಹಣ್ಣಿನಲ್ಲಿ ಆ್ಯಂಟಿ ಆಕ್ಸಿಡೆಂಟ್ ಗಳು ಸಮೃದ್ಧವಾಗಿದೆ. ಇದರಲ್ಲಿ ವಿಟಮಿನ್ ಬಿ6, ಸಿ, ಪೊಟ್ಯಾಶಿಯಂ, ಫೈಬರ್ ಸೇರಿದಂತೆ ಹಲವು ಪೋಷಕಾಂಶಗಳು ಸಮೃದ್ಧವಾಗಿದೆ. ಇದು ಮಹಿಳೆಯರಿಗೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ನಿವಾರಿಸುತ್ತದೆ. ಮತ್ತು ಇದು ಉತ್ತಮ ನಿದ್ರೆಗೂ ಸಹಕಾರಿಯಾಗಿದೆ.

ಅಲ್ಲದೇ ವಾಲ್ ನಟ್ಸ್, ಸಾಲ್ಮನ್ ಫಿಶ್ ನಲ್ಲಿ ಕೊಬ್ಬಿನಾಮ್ಲಗಳು ಸಮೃದ್ಧವಾಗಿದೆ. ಹಾಗಾಗಿ ಇದು ಮಹಿಳೆಯರಲ್ಲಿ ಕಾಡುವಂತಹ ಹಾರ್ಮೋನ್ ಸಮಸ್ಯೆಯನ್ನು ನಿವಾರಿಸುತ್ತದೆ. ಅಲ್ಲದೇ ಮೊಟ್ಟೆಗಳಲ್ಲಿ ಪ್ರೋಟೀನ್ ಸಮೃದ್ಧವಾಗಿದ್ದು, ಇದು ಪಿಸಿಓಎಸ್ ಸಮಸ್ಯೆಯನ್ನು ನಿವಾರಿಸುತ್ತದೆ. ಅಗಸೆ ಬೀಜಗಳು, ಚಿಯಾ ಬೀಜಗಳು ಪಿಸಿಓಎಸ್ ನಿಂದ ಉಂಟಾಗುವ ಹಾರ್ಮೋನ್ ಅಸಮತೋಲವನ್ನು ತಡೆಯುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...