Kannada Duniya

ಬೇಸಿಗೆಯಲ್ಲಿ ಮೊಟ್ಟೆ ತಿನ್ನುವುದು ಒಳ್ಳೆಯದೇ?

ಮೊಟ್ಟೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಹಲವು ಬಗೆಯ ಪೋಷಕಾಂಶಗಳಿವೆ. ಇದು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಹಾಗಾಗಿ ಮೊಟ್ಟೆ ಸೇವಿಸಲು ಎಲ್ಲರೂ ಇಷ್ಟಪಡುತ್ತಾರೆ. ಆದರೆ ಬೇಸಿಗೆಯಲ್ಲಿ ಮೊಟ್ಟೆ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದೇ? ಎಂಬುದನ್ನು ತಿಳಿಯಿರಿ.

ಆಹಾರ ತಜ್ಞರು ಮೊಟ್ಟೆಯಲ್ಲಿ ಹಲವು ಪೋಷಕಾಂಶಗಳಿರುವ ಕಾರಣ ಮೊಟ್ಟೆಯನ್ನು ಯಾವುದೇ ಋತುವಿನಲ್ಲೂ ಸೇವಿಸಬಹುದಂತೆ. ಹಾಗಾಗಿ ಜನರು ಬೇಸಿಗೆಯಲ್ಲೂ ಮೊಟ್ಟೆಗಳನ್ನುತಿನ್ನಬಹುದು. ಆದರೆ ಅವುಗಳ ಪ್ರಮಾಣವು ಚಳಿಗಾಲಕ್ಕಿಂತ ಕಡಿಮೆ ಇರಬೇಕಂತೆ.

ಹಾಗಾಗಿ ಬೇಸಿಗೆಯಲ್ಲಿ ಜನರು ಪ್ರತಿದಿನ ಒಂದು ಅಥವಾ 2 ಮೊಟ್ಟೆಗಳನ್ನು ಸೇವಿಸಬಹುದಂತೆ. ಹಾಗೇ ಪ್ರತಿ ಋತುಗಳಲ್ಲಿ ಮೊಟ್ಟೆಯನ್ನು ಸೇವಿಸುವಾಗ ಬೇಯಿಸಿ ತಿನ್ನಿ. ಅಥವಾ ಆಮ್ಲೇಟ್ ರೂಪದಲ್ಲಿ ತಿನ್ನಬಹುದು. ಆದರೆ ಮೊಟ್ಟೆಯನ್ನು ಹಸಿಯಾಗಿ ತಿನ್ನಬೇಡಿ. ಇದರಲ್ಲಿ ಕ್ಯಾಲ್ಸಿಯಂ, ಪ್ರೋಟಿನ್ ಸಮೃದ್ಧವಾಗಿದ್ದು, ಮೂಳೆಗಳನ್ನು ಬಲಗೊಳಿಸುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...