Kannada Duniya

ಚಳಿಗಾಲದಲ್ಲಿ ಸೇವಿಸಿದ ಈ ಪದಾರ್ಥಗಳನ್ನು ಬೇಸಿಗೆಯಲ್ಲಿ ಸೇವಿಸಿದರೆ ಅಪಾಯ ಕಾಡಬಹುದು ಎಚ್ಚರ…!

ಹವಾಮಾನ ಬದಲಾದಂತೆ ನಮ್ಮ ದಿನಚರಿಗಳನ್ನು ಬದಲಿಸುವುದು ಅವಶ್ಯಕ. ಇದರಲ್ಲಿ ಆಹಾರ ಕ್ರಮ ಕೂಡ ಒಂದು. ಹಾಗಾಗಿ ಈಗಾಗಲೇ ಚಳಿಗಾಲ ಮುಗಿದು ಬೇಸಿಗೆಕಾಲ ಪ್ರಾರಂಭವಾಗುತ್ತಿದೆ. ಇದರಿಂದ ವಾತಾವರಣದಲ್ಲಿ ತುಂಬಾ ಬಿಸಿ ಇರುತ್ತದೆ. ಹಾಗಾಗಿ ಚಳಿಗಾಲದಲ್ಲಿ ಸೇವಿಸಿದ ಈ ಪದಾರ್ಥಗಳನ್ನು ಬೇಸಿಗೆಯಲ್ಲಿ ಸೇವಿಸಬೇಡಿ. ಯಾಕೆಂದರೆ ಇದರಿಂದ ಆರೋಗ್ಯಕ್ಕೆ ಅಪಾಯವಾಗಬಹುದು. ಹಾಗಾಗಿ ಆ ಪದಾರ್ಥಗಳು ಯಾವುದೆಂಬುದನ್ನು ತಿಳಿಯೋಣ.

ಅರಿಶಿನ: ಇದು ಚಳಿಗಾಲದಲ್ಲಿ ಸೇವಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ನಿಜ. ಆದರೆ ಇದನ್ನು ಬೇಸಿಗೆಯಲ್ಲಿ ಸೇವಿಸಿದರೆ ಕಿರಿಕಿರಿಯನ್ನುಂಟುಮಾಡುತ್ತದೆ. ಮತ್ತು ಇದು ಜೀರ್ಣಕ್ರಿಯೆಯ ಸಮಸ್ಯೆಯನ್ನು ಉಂಟುಮಾಡುತ್ತದೆ. ಹಾಗೇ ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಹೆಚ್ಚಿಸಬಹುದು.

ಶುಂಠಿ : ಮಧುಮೇಹಿಗಳು ಬೇಸಿಗೆಯಲ್ಲಿ ಶುಂಠಿಯನ್ನು ಸೇವಿಸಬೇಡಿ. ಯಾಕೆಂದರೆ ಇದು ಬೇಸಿಗೆಯಲ್ಲಿ ದೇಹದ ಶಾಖವನ್ನು ಹೆಚ್ಚಿಸುತ್ತದೆ. ಇದರಿಂದ ಆರೋಗ್ಯ ಸಮಸ್ಯೆಗಳು ಕಾಡಬಹುದು.

ಬೆಲ್ಲ : ಬೇಸಿಗೆಯಲ್ಲಿ ಬೆಲ್ಲವನ್ನು ಸೇವಿಸಿದರೆ ಅತಿಸಾರ ಸಮಸ್ಯೆ ಕಾಡಬಹುದು. ಮತ್ತು ಮೂಗಿನಿಂದ ರಕ್ತಸ್ರಾವವಾಗುವ ಸಂಭವವಿದೆ. ಹಾಗಾಗಿ ಬೇಸಿಗೆಯಲ್ಲಿ ಬೆಲ್ಲ ಹೆಚ್ಚಾಗಿ ಸೇವಿಸಬೇಡಿ.

ಲವಂಗ : ಇದರಲ್ಲಿ ಔಷಧೀಯ ಗುಣಗಳಿವೆ ನಿಜ. ಇದು ಅನೇಕ ರೋಗಗಳನ್ನು ನಿವಾರಿಸುತ್ತದೆ. ಆದರೆ ಬೇಸಿಗೆಯಲ್ಲಿ ಲವಂಗವನ್ನು ಹೆಚ್ಚು ಸೇವಿಸಿದರೆ ರಕ್ತ ತೆಳುವಾಗಬಹುದು.

Almond Hair pack: ಕೂದಲಿನ ಹೊಳಪಿಗಾಗಿ ಬಾದಾಮಿ ಹೇರ್ ಪ್ಯಾಕ್ ಹಚ್ಚಿ…!

ಕಾಳುಮೆಣಸು : ಕಾಳುಮೆಣಸು ಆರೋಗ್ಯಕ್ಕೆ ಉತ್ತಮ. ಆದರೆ ಇದನ್ನು ಬೇಸಿಗೆ ಕಾಲದಲ್ಲಿ ಸೇವಿಸಿದರೆ ಗಂಟಲು ಮತ್ತು ಹೊಟ್ಟೆಯಲ್ಲಿ ಸುಡುವ ವೇದನೆ ಕಾಡಬಹುದು.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...