Kannada Duniya

ಬೇಸಿಗೆಯಲ್ಲಿ ಕಣ್ಣಿನ ರಕ್ಷಣೆ ಹೀಗೆ ಮಾಡಿ

ಬೇಸಿಗೆಯಲ್ಲಿ ಬಿಸಿಲಿನ ತಾಪ ಹೆಚ್ಚಾಗಿರುವ ಕಾರಣ ನೀವು ಹೊರಗಡೆ ಹೋದಾಗ ಕಣ್ಣುಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಇದರಿಂದ ಕಣ್ಣಿನಲ್ಲಿ ಉರಿ ಕಂಡುಬರುತ್ತದೆ, ಹಾಗಾಗಿ ಬೇಸಿಗೆಯಲ್ಲಿ ಕಣ್ಣಿನ ರಕ್ಷಣೆ ಹೀಗೆ ಮಾಡಿ.

ಬೇಸಿಗೆಯಲ್ಲಿ ನೀವು ಹೊರಗಡೆ ಹೋಗುವಾಗ ಕಣ್ಣುಗಳನ್ನು ಬಿಸಿಲಿನಿಂದ ರಕ್ಷಿಸಲು ಸನ್ ಗ್ಲಾಸ್ ಗಳನ್ನು ಬಳಸಿ. ಇದು ಕಣ್ಣನ್ನು ಬಿಸಿಲಿನಿಂದ ರಕ್ಷಿಸುತ್ತದೆ ಮತ್ತು ತಂಪಾಗಿಸುತ್ತದೆ. ಇದರಿಂದ ಕಣ್ಣುಗಳಲ್ಲಿ ಉರಿ, ನೀರು ಸೋರುವಂತಹ ಸಮಸ್ಯೆ ಕಾಡುವುದಿಲ್ಲ.

ಹಾಗೇ ಬೇಸಿಗೆಯಲ್ಲಿ ವಾತಾವರಣ ತುಂಬಾ ಬಿಸಿಯಾಗಿರುವ ಕಾರಣ ಕಣ್ಣುಗಳು ಹೆಚ್ಚು ಹಾನಿಗೊಳಗಾಗುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಮೊಬೈಲ್, ಟಿವಿ ಕಂಪ್ಯೂಟರ್ ಬಳಕೆಯನ್ನು ಕಡಿಮೆ ಮಾಡಿ.

ಹಾಗೇ ಬೇಸಿಗೆಯಲ್ಲಿ ಕಣ್ಣುಗಳನ್ನು ಆರೋಗ್ಯವಾಗಿಡಲು ವಿಟಮಿನ್ ಸಿ, ಎ ಮತ್ತು ಖನಿಜಗಳು ಸಮೃದ್ಧವಾಗಿರುವಂತಹ ಆಹಾರವನ್ನು ಸೇವಿಸಿ. ಹಣ್ಣು , ಹಾಲು, ಮೊಸರು ಹೆಚ್ಚು ಸೇವಿಸಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...