Kannada Duniya

Almond Hair pack: ಕೂದಲಿನ ಹೊಳಪಿಗಾಗಿ ಬಾದಾಮಿ ಹೇರ್ ಪ್ಯಾಕ್ ಹಚ್ಚಿ…!

ಬಾದಾಮಿಯಲ್ಲಿ ವಿಟಮಿನ್ ಇ ಸಮೃದ್ಧವಾಗಿದೆ. ಇದು ಆರೋಗ್ಯಕ್ಕೆ ತುಂಬಾ ಉತ್ತಮ ಮಾತ್ರವಲ್ಲ ಇದರಿಂದ ಕೂದಲಿನ ಆರೋಗ್ಯವನ್ನು ಕಾಪಾಡಬಹುದು. ಹಾಗಾಗಿ ಬಾದಾಮಿಯಿಂದ ಕೂದಲಿಗೆ ಹೇರ್ ಪ್ಯಾಕ್ ತಯಾರಿಸಿ ಬಳಸಿ.

ಬಾದಾಮಿ 10-15 ಹಾಗೂ ಮೆಂತ್ಯ ಬೀಜಗಳನ್ನು 1 ಚಮಚ ತೆಗೆದುಕೊಂಡು ನೀರಿನಲ್ಲಿ ನೆನೆಸಿ ಮಿಕ್ಸಿಯಲ್ಲಿ ರುಬ್ಬಿ ಪೇಸ್ಟ್ ತಯಾರಿಸಿ. ಇದಕ್ಕೆ ಮೊಸರು 2 ಚಮಚ ಮತ್ತು ಮೊಟ್ಟೆಯ ಬಿಳಿಭಾಗ ಮತ್ತು ಲಿಂಬೆ ರಸ 1 ಚಮಚ ಸೇರಿಸಿ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ. ಇದನ್ನು ವಾರಕ್ಕೊಮ್ಮೆ ಹಚ್ಚಿ.

ಈ ನೈಸರ್ಗಿಕ ಪದಾರ್ಧಗಳನ್ನು ಹೇರ್ ಕಂಡೀಷನರ್ ನಲ್ಲಿ ಬಳಸಿದರೆ ಬೇಸಿಗೆಯಲ್ಲೂ ಕೂಲ್ ಆಗಿರಬಹುದಂತೆ

ಈ ಹೇರ್ ಪ್ಯಾಕ್ ಕೂದಲಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದು ಕೂದಲಿನ ನೈಸರ್ಗಿಕ ಹೊಳಪನ್ನು ಹೆಚ್ಚಿಸುತ್ತದೆ. ಕೂದಲಿನ ತೇವಾಂಶವನ್ನು ಕಾಪಾಡಿ, ಒಣ ಕೂದಲಿನ ಸಮಸ್ಯೆಯನ್ನು ನಿವಾರಿಸುತ್ತದೆ. ತಲೆಹೊಟ್ಟನ್ನು ದೂರಮಾಡುತ್ತದೆ.

Almonds are rich in Vit E and great for hair.Try this hair pack for healthy, shining hair


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...