Kannada Duniya

ಬೇಸಿಗೆಯಲ್ಲಿ ಈ ಡ್ರೈಫ್ರೂಟ್ಸ್ ಸೇವಿಸಿದರೆ ದೇಹ ತಂಪಾಗಿರುತ್ತದೆಯಂತೆ…!

ಬೇಸಿಗೆಯಲ್ಲಿ ವಾತಾವರಣದಲ್ಲಿ ಉಷ್ಣತೆ ಹೆಚ್ಚಾಗಿರುತ್ತದೆ. ಇದರಿಂದ ನಮ್ಮ ದೇಹದ ಉಷ್ಣತೆ ಕೂಡ ಹೆಚ್ಚಾಗುತ್ತದೆ. ಇದರಿಂದ ಹಲವಾರು ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಹಾಗಾಗಿ ನಿಮ್ಮ ದೇಹವನ್ನು ತಂಪಾಗಿಸಲು ಬೇಸಿಗೆಯಲ್ಲಿ ಈ ಡ್ರೈ ಫ್ರೂಟ್ಸ್ ಗಳನ್ನು ಸೇವಿಸಿ.

ಒಣದ್ರಾಕ್ಷಿ : ಇದು ಶಕ್ತಿಯ ಮೂಲವಾಗಿದೆ. ಇದು ತಂಪಾಗಿಸುವ ಗುಣವನ್ನು ಹೊಂದಿದೆ. ಹಾಗಾಗಿ ಬೇಸಿಗೆಯಲ್ಲಿ ರಾತ್ರಿ ಒಣದ್ರಾಕ್ಷಿಯನ್ನು ನೀರಿನಲ್ಲಿ ನೆನೆಹಾಕಿ ಬೆಲಿಗ್ಗೆ ಖಾಲಿ ಹೊಟ್ಟೆಯಲ್ಲಿ ಅದನ್ನು ಸೇವಿಸಿ.

ಅಂಜೂರ : ಇದು ದೇಹದ ಶಾಖವನ್ನು ಹೆಚ್ಚಿಸುವುದಿಲ್ಲ. ಮತ್ತು ಹಾರ್ಮೋನ್ ಸಮಸ್ಯೆಗಳಿಂದ ರಕ್ಷಿಸುತ್ತದೆ. ಹಾಗಾಗಿ ಅಂಜೂರವನ್ನು ರಾತ್ರಿ ನೀರಿನಲ್ಲಿ ನೆನಸಿಟ್ಟು ಸೇವಿಸಿ.

ಬಾದಾಮಿ : ಇದು ತಂಪಾಗಿಸುವ ಗುಣವನ್ನು ಹೊಂದಿದ್ದು, ಹುಣ್ಣುಗಳ ಸಮಸ್ಯೆಯನ್ನು ನಿವಾರಿಸುತ್ತದೆ. ಹಾಗಾಗಿ ಇದನ್ನು ರಾತ್ರಿ ನೆನೆಸಿಟ್ಟು ಬೆಳಿಗ್ಗೆ ಸೇವಿಸಿ. ಇದರಿಂದ ಬೇಸಿಗೆಯಲ್ಲಿ ಕಾಡುವಂತಹ ಮೊಡವೆಗಳ ಸಮಸ್ಯೆ ಕಾಡುವುದಿಲ್ಲ.

ಖರ್ಜೂರ : ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಖರ್ಜೂರವನ್ನು ಸೇವಿಸಿ. ಇದು ಬೇಸಿಗೆಯಲ್ಲಿ ಕಾಡುವಂತಹ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತದೆ. ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...