Kannada Duniya

ಶೀಟ್ ಮಾಸ್ಕ್ ಅನ್ವಯಿಸುವ ಸರಿಯಾದ ವಿಧಾನ ತಿಳಿದುಕೊಳ್ಳಿ

ಹೆಚ್ಚಿನ ಮಹಿಳೆಯರು ತ್ವಚೆಯ ಆರೈಕೆಗಾಗಿ ಶೀಟ್ ಮಾಸ್ಕ್ ಅನ್ನು ಬಳಸುತ್ತಾರೆ. ಇದನ್ನು ವಾರಕ್ಕೊಮ್ಮೆ ಬಳಸುತ್ತಾರೆ. ಆದರೆ ಕೆಲವರಿಗೆ ಇದನ್ನು ಬಳಸುವ ಸರಿಯಾದ ವಿಧಾನ ತಿಳಿದಿಲ್ಲ. ಹಾಗಾಗಿ ಇದರಿಂದ ಯಾವುದೇ ಫಲಿತಾಂಶ ಸಿಗುವುದಿಲ್ಲ. ಹಾಗಾಗಿ ಶೀಟ್ ಮಾಸ್ಕ್ ಅನ್ವಯಿಸುವ ಸರಿಯಾದ ವಿಧಾನ ತಿಳಿದುಕೊಳ್ಳಿ.

ಮುಖಕ್ಕೆ ಶೀಟ್ ಮಾಸ್ಕ್ ಬಳಸುವ ಮುನ್ನ ಮುಖದಲ್ಲಿರು ಎಣ್ಣೆಯಂಶವನ್ನು ಸ್ವಚ್ಛಗೊಳಿಸಿ. ಮತ್ತು ಉಗುರು ಬೆಚ್ಚಗಿರುವ ನೀರಿನಿಂದ ಮುಖವನ್ನು ತೊಳೆಯಿರಿ. ಇದರಿಂದ ಚರ್ಮದ ರಂಧ್ರಗಳು ತೆರೆದುಕೊಳ್ಳುತ್ತದೆ.

ಶೀಟ್ ಮಾಸ್ಕ್ ಅನ್ನು ಮುಖದ ಮೇಲೆ ಹಚ್ಚಿ 15 ನಿಮಿಷಗಳ ಕಾಲ ವಿಶ್ರಾಂತಿ ಪಡೆಯಿರಿ. ನಂತರ ತೆಗೆದ ಬಳಿಕ ಮುಖದಲ್ಲಿರುವ ದ್ರವವನ್ನು ತೆಗೆದುಹಾಕಿ.
ಶೀಟ್ ಮಾಸ್ಕ್ ಬಳಸಿ ನಂತರ ಅದನ್ನು ತೆಗೆದ ಮೇಲೆ ಮುಖಕ್ಕೆ ಹತ್ತಿ ಪ್ಯಾಡ್ ನಿಂದ ಟೋನರ್ ಅನ್ನು ಹಚ್ಚಿ.

ಕೊನೆಯಲ್ಲಿ ಮಾಯಿಶ್ಚರೈಸರ್ ಅನ್ನು ಮುಖಕ್ಕೆ ಹಚ್ಚಿ ಮಸಾಜ್ ಮಾಡಿ. ಈ ವಿಧಾನದಿಮದ ಶೀಟ್ ಮಾಸ್ಕ್ ಸಂಪೂರ್ಣ ಫಲಿತಾಂಶವನ್ನು ಪಡೆಯಬಹುದಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...