Kannada Duniya

ಅರಿಶಿನವನ್ನು ಮುಖಕ್ಕೆ ಹಚ್ಚುವಾಗ ಈ ತಪ್ಪನ್ನು ಮಾಡಬೇಡಿ

ಚರ್ಮದ ಸೌಂದರ್ಯವನ್ನು ಹೆಚ್ಚಿಸಲು ಕೆಲವರು ಮುಖಕ್ಕೆ ಅರಿಶಿನವನ್ನು ಹಚ್ಚುತ್ತಾರೆ. ಇದು ಸೋಂಕು ನಿವಾರಕ ಗುಣವನ್ನು ಹೊಂದಿರುವ ಕಾರಣ ಇದು ಚರ್ಮದ ಸಮಸ್ಯೆಗಳು ಬರದಂತೆ ತಡೆಯುತ್ತದೆ. ಆದರೆ ಅರಿಶಿನವನ್ನು ಮುಖಕ್ಕೆ ಹಚ್ಚುವಾಗ ಈ ಸಲಹೆ ಪಾಲಿಸಿ.

ಮುಖಕ್ಕೆ ಅರಿಶಿನವನ್ನು ಹಚ್ಚಿದ ಬಳಿಕ ಮುಖವನ್ನು ಚೆನ್ನಾಗಿ ತೊಳೆಯಿರಿ. ಇಲ್ಲವಾದರೆ ಇದರಿಂದ ಮುಖದಲ್ಲಿ ದದ್ದುಗಳು ಅಥವಾ ಕಿರಿಕಿರಿ ಉಂಟಾಗುತ್ತದೆ.
ಮುಖದ ಹೊಳಪನ್ನು ಹೆಚ್ಚಿಸಲು ಅರಿಶಿನವನ್ನು ದೀರ್ಘಕಾಲದವರೆಗೆ ಮುಖದಲ್ಲಿ ಇಡಬೇಡಿ. ಇದರಿಂದ ಚರ್ಮದಲ್ಲಿ ಹಳದಿ ಕಲೆಗಳು, ಮೊಡವೆಗಳ ಸಮಸ್ಯೆ ಕಾಡುತ್ತದೆಯಂತೆ.

ಮುಖಕ್ಕೆ ಅರಿಶಿನ ಹಚ್ಚಿದ ನಂತರ ಮುಖವನ್ನು ಫೇಸ್ ವಾಶ್ ಬಳಸಿ ಮುಖವನ್ನು ತೊಳೆಯಬೇಡಿ. ಇದರಿಂದ ಅರಿಶಿನ ಗುಣ ಕಡಿಮೆಯಾಗುತ್ತದೆ. ಇದು ಚರ್ಮದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ಮುಖಕ್ಕೆ ಅರಿಶಿನವನ್ನು ಹಚ್ಚಿದ ನಂತರ ಬಿಸಿಲಿಗೆ ಹೋಗುವುದನ್ನು ತಪ್ಪಿಸಿ. ಇಲ್ಲವಾದರೆ ಇದರಿಂದ ಚರ್ಮ ಕಪ್ಪಾಗುತ್ತದೆಯಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...