Kannada Duniya

ಮುಖಕ್ಕೆ ದಿನ ಸಾಬೂನು ಬಳಸುವ ಮುನ್ನ ಈ ವಿಚಾರದ ಬಗ್ಗೆ ಇರಲಿ ಎಚ್ಚರ!

ದಿನಕ್ಕೆ ನಾಲ್ಕೈದು ಬಾರಿಯಾದರೂ ಮುಖಕ್ಕೆ ಸಾಬೂನು ಹಾಕಿ ತಿಕ್ಕಿ ತೊಳೆಯುವ ಅಭ್ಯಾಸ ನಿಮಗಿದ್ದರೆ ಇಲ್ಲಿ ಕೇಳಿ. ನಿತ್ಯ ಸಾಬೂನಿನಿಂದ ತ್ವಚೆಯನ್ನು ತಿಕ್ಕಿ ತೊಳೆಯುವುದರಿಂದ ಮುಖದ ತೇವಾಂಶ ದೂರವಾಗುತ್ತದೆ. ಇದರಿಂದ ತ್ವಚೆ ಒಣಗಿದಂತಾಗುತ್ತದೆ ಹಾಗೂ ಒರಟಾಗುತ್ತದೆ.
ಅದೇ ರೀತಿ ಸಣ್ಣ ವಯಸ್ಸಿನಲ್ಲಿ ನಿಮ್ಮ ತ್ವಚೆ ಹೆಚ್ಚು ವಯಸ್ಸಾದವರಂತೆ ಕಾಣಿಸುತ್ತದೆ. ತ್ವಚೆಯ ತುರಿಕೆಗೂ ಇದು ಕಾರಣವಾಗುವುದುಂಟು.
ಸೋಪ್ ನಲ್ಲಿರುವ ಕೆಲವು ರಾಸಾಯನಿಕಗಳು ಚರ್ಮದ ಆಮ್ಲೀಯತೆಯನ್ನು ಕಡಿಮೆ ಮಾಡಿ ಉತ್ತಮ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತವೆ. ಸರಿಯಾದ ಸಾಬೂನು ಬಳಸದೆ ಇರುವುದು ಕೂಡ ಮೊಡವೆ ಸಮಸ್ಯೆ ಹೆಚ್ಚಳಕ್ಕೆ ಕಾರಣವಾಗಬಹುದು.
ಸೂರ್ಯನ ಕಿರಣಗಳಿಂದ ನಾವು ದೇಹಕ್ಕೆ ಅಗತ್ಯವಿರುವ ವಿಟಮಿನ್ ಡಿಯನ್ನು ಪಡೆದುಕೊಳ್ಳುತ್ತೇವೆ. ಪದೇಪದೇ ಸೋಪ್ ನಿಂದ ತ್ವಚೆಯನ್ನು ತಿಕ್ಕಿ ತೊಳೆಯುವುದರಿಂದ ರಾಸಾಯನಿಕಗಳು ವಿಟಮಿನ್ ಡಿ ಯನ್ನು ಕಿತ್ತುಕೊಳ್ಳುತ್ತವೆ ಎನ್ನುತ್ತಾರೆ ತಜ್ಞರು.
ಅದರ ಬದಲು ಫೇಸ್ ವಾಶ್ ನಿಂದ ಅಥವಾ ಕ್ರೀಮ್ ಕ್ಲೆನ್ಸರ್ ಗಳಿಂದ ಮುಖವನ್ನು ತೊಳೆದುಕೊಳ್ಳುವುದು ಸುರಕ್ಷಿತ ಮಾರ್ಗವಾಗಿದೆ.

Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...