Kannada Duniya

ಕತ್ರಿನಾ ಕೈಫ್ ರೀತಿ ತ್ವಚೆಯನ್ನು ಪಡೆಯಲು ಈ ಸಲಹೆ ಪಾಲಿಸಿ

ಬಾಲಿವುಡ್ ನಟಿ ಕತ್ರಿನಾ ಕೈಫ್ ರವರ ತ್ವಚೆ ತುಂಬಾ ಸುಂದರವಾಗಿದೆ. ಹಾಗಾಗಿ ಅವರನ್ನು ನೋಡಿದವರು ಅವರಂತೆ ತಮ್ಮ ತ್ವಚೆ ಆಗಬೇಕೆಂದು ಬಯಸುತ್ತಾರೆ. ನಟಿ ಕತ್ರಿನಾ ಕೈಫ್ ತ್ವಚೆಯ ಬಗ್ಗೆ ಹೆಚ್ಚು ಕಾಳಜಿವಹಿಸುತ್ತಾರಂತೆ. ಹಾಗಾಗಿ ಅವರ ಸುಂದರ ತ್ವಚೆಯ ರಹಸ್ಯ ತಿಳಿಯಿರಿ.

ನಟಿ ಕತ್ರಿನಾ ಕೈಫ್ ಅವರು ಬೆಳಿಗ್ಗೆ ಪ್ರತಿದಿನ 2 ಲೋಟ ಉಗುರು ಬೆಚ್ಚಗಿರುವ ನೀರನ್ನು ಕುಡಿಯುತ್ತಾರಂತೆ. ಇದು ದೇಹದಲ್ಲಿರುವ ಕಲ್ಮಶವನ್ನು ಹೊರಹಾಕಲು ಸಹಾಯ ಮಾಡುತ್ತದೆ.

ಹಾಗೇ ನಟಿ ಪ್ರತಿದಿನ ಬಾರ್ಲಿ ನೀರನ್ನು ಕುಡಿಯುತ್ತಾರಂತೆ. ಇದು ದೇಹ ಮಾತ್ರವಲ್ಲ ಚರ್ಮದ ಆರೋಗ್ಯಕ್ಕೂ ಒಳ್ಳೆಯದಂತೆ. ಇದು ಕಲೆಗಳನ್ನು ಹೋಗಲಾಡಿಸುತ್ತದೆ.

ಇವರು ಪ್ರತಿದಿನ ಮುಖಕ್ಕೆ ಮಸಾಜ್ ನೀಡುತ್ತಾರಂತೆ, ಮುಖಕ್ಕೆ ಯಾವುದಾದರೂ ಫೇಶಿಯಲ್ ಆಯಿಲ್ ಅನ್ನು ಬಳಸಿ 10 ನಿಮಿಷ ಮಸಾಜ್ ಮಾಡುತ್ತಾರಂತೆ. ಇದು ರಕ್ತ ಪರಿಚಲನೆಯನ್ನು ಸರಾಗವಾಗಿಸಿ ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆಯಂತೆ.

ಹಾಗೇ ಅವರು ಮುಖಕ್ಕೆ ಮೇಕಪ್ ಮಾಡುವ ಮುನ್ನ ಐಸ್ ನೀರಿನಿಂದ ಮುಖಕ್ಕೆ ಮಸಾಜ್ ನೀಡುತ್ತಾರಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...