Kannada Duniya

ಹೆರಿಗೆಯ ನಂತರ ಹೊಟ್ಟೆಯನ್ನು ಕಡಿಮೆ ಮಾಡಲು ಈ ಯೋಗಾಸನ ಅಭ್ಯಾಸ ಮಾಡಿ

ಹೆರಿಗೆಯ ನಂತರ ಹೊಟ್ಟೆ ಜೋತುಬೀಳುತ್ತದೆ. ಇದರಿಂದ ನಿಮ್ಮ ದೇಹದ ಆಕಾರ ಕೆಡುತ್ತದೆ. ನೀವು ನಿಮಗಿಷ್ಟ ಬಂದ ಡ್ರೆಸ್ ಗಳನ್ನು ಧರಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಈ ಜೋತು ಬಿದ್ದ ಹೊಟ್ಟೆಯನ್ನು ಕಡಿಮೆ ಮಾಡಲು ಈ ಯೋಗಾಸನ ಮಾಡಿ.

ಪಶ್ಚಿಮೋತ್ತನಾಸನ : ಎರಡೂ ಕಾಲುಗಳನ್ನು ಹೊರಕ್ಕೆ ಚಾಚಿ ನೆಲದ ಮೇಲೆ ಕುಳಿತುಕೊಳ್ಳಿ. ಕಾಲ್ಬೆರಳುಗಳು ಒಟ್ಟಿಗೆ ಇರಲಿ, ನಂತರ ಉಸಿರಾಡುವಂತೆ ನಿಮ್ಮ ತೋಳುಗಳನ್ನು ಮೇಲಕ್ಕೆತ್ತಿ ಮತ್ತು ದೇಹವನ್ನು ಸಾಧ್ಯವಾದಷ್ಟು ಮುಂದಕ್ಕೆ ಬಾಗಿಸಿ ಮತ್ತು ದೇಹವನ್ನು ಓರೆಯಾಗಿಸಿ. ಮುಂದಕ್ಕೆ ಬಾಗುವಾಗ ಉಸಿರನ್ನು ಬಿಡಿ.

ತ್ರಿಕೋನಾಸನ : ನೀವು ನೇರವಾಗಿ ನಿಂತುಕೊಳ್ಳಿ. ನಿಮ್ಮ ಪಾದಗಳ ನಡುವೆ ಸುಮಾರು 2 ಅಡಿ ಅಂತರವಿರಲಿ. ನಂತರ ನಿಮ್ಮ ಉಸಿರನ್ನು ದೀರ್ಘವಾಗಿ ತೆಗೆದುಕೊಂಡು ದೇಹವನ್ನು ಬಲಕ್ಕೆ ಬಗ್ಗಿಸಿ. ನಂತರ ನಿಮ್ಮ ಎಡಗೈಯನ್ನು ಮೇಲಕ್ಕೆ ತೆಗೆದುಕೊಂಡು ಹೋಗುವಾಗ ನಿಮ್ಮ ಕಣ್ಣುಗಳನ್ನು ಎಡಗೈಯ ಬೆರಳುಗಳ ಮೇಲೆ ಇರಿಸಿ. ಈ ಭಂಗಿಯಲ್ಲಿ ಸ್ವಲ್ಪ ಸಮಯವಿದ್ದು ನಂತರ ಸಾಮಾನ್ಯ ಸ್ಥಿತಿ ಬನ್ನಿ. ಇದನ್ನು ಇನ್ನೊಂದು ಬದಿಯಲ್ಲಿ ಮಾಡಿ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...