Kannada Duniya

Raw onion smell on breath: ಹಸಿ ಈರುಳ್ಳಿ ವಾಸನೆ ತೆಗೆದು ಹಾಕುವುದು ಹೇಗೆ…?

ನಾರ್ತ್ ಇಂಡಿಯನ್ ಊಟ ಮಾಡುವ ವೇಳೆ ಹಸಿ ಈರುಳ್ಳಿ ಸೇವನೆ ಮಾಡಿರುತ್ತೀರಿ. ಆ ಬಳಿಕ ಅದರ ವಾಸನೆಗೆ ಮುಜುಗುರ ಪಟ್ಟಿರುತ್ತೀರಿ. ಬಾಯಿಯಿಂದ ಹೊರಸೂಸುವ ಈ ದುರ್ವಾಸನೆಯನ್ನು ದೂರ ಮಾಡುವುದು ಹೇಗೆ?

ಈರುಳ್ಳಿ ತಿಂದಾದ ಬಳಿಕ ಬಹಳ ಹೊತ್ತಿನ ತನಕ ಬಾಯಿಯಿಂದ ಕೆಟ್ಟ ವಾಸನೆ ಬರುತ್ತಿರುತ್ತದೆ. ಹಾಗಾಗಿ ತಾಜಾ ಹಣ್ಣುಗಳನ್ನು ಸೇವಿಸುವುದರಿಂದ ಬಾಯಿಯ ಈ ಸಲ್ಫರ್ ವಾಸನೆ ದೂರವಾಗುತ್ತದೆ.ಅದರಲ್ಲೂ ಸೇಬು ತಿನ್ನುವುದು ಹೆಚ್ಚು ಒಳ್ಳೆಯದು.

ತುಳಸಿ ಎಲೆಯನ್ನು ಬಾಯಿಗೆ ಹಾಕಿ ಜಗಿಯುವುದರಿಂದ, ಪುದೀನಾ ಸೊಪ್ಪಿನ ಸೇವನೆಯಿಂದ ಬಾಯಿಯ ವಾಸನೆಯನ್ನು ದೂರ ಮಾಡಬಹುದು. ಹಾಗೇ ಚೂಯಿಂಗ್ ಗಮ್ ಅನ್ನು ಇಪ್ಪತ್ತು ನಿಮಿಷಗಳ ಕಾಲ ಜಗಿಯುವುದರಿಂದಲೂ ಈ ವಾಸನೆ ದೂರವಾಗುತ್ತದೆ.

ಒಂದು ಲೋಟ ಬೆಚ್ಚಗಿನ ನೀರಿಗೆ ಚಿಟಿಕೆ ಆಪಲ್ ಸೈಡರ್ ವಿನೆಗರ್ ಬೆರೆಸಿ ಕುಡಿಯುವುದರಿಂದ ಈ ವಾಸನೆ ದೂರವಾಗುತ್ತದೆ. ಗ್ರೀನ್ ಟೀ ಯೂ ಇದೇ ಪ್ರಯೋಜನವನ್ನು ನೀಡುತ್ತದೆ.

ಬಾಯಿಯಿಂದ ಕೆಟ್ಟ ವಾಸನೆ ಬರಲು ಈ ಕಾಯಿಲೆಗಳೇ ಕಾರಣ

ಟೂತ್ ಪೇಸ್ಟ್ ನಿಂದ ಬ್ರಶ್ ಮಾಡುವುದರಿಂದ ಹಾಗೂ ಮೌತ್ ವಾಶ್ ಬಳಸುವುದರಿಂದ ಬಾಯಿಯ ವಾಸನೆ ದೂರವಾಗುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...