Kannada Duniya

ಬಾಯಿ ದುರ್ವಾಸನೆ ಬರುವುದು ಮಧುಮೇಹದ ಲಕ್ಷಣವೇ?

ಕೆಲವರ ಬಾಯಿಯಿಂದ ದುರ್ವಾಸನೆ ಬರುತ್ತಿರುತ್ತದೆ. ಇದರಿಂದ ಬೇರೆಯವರಿಗೆ ಕಿರಿಕಿರಿಯಾಗುತ್ತದೆ. ಹಾಗಾಗಿ ಈ ಬಾಯಿಯ ದುರ್ವಾಸನೆಯನ್ನು ನಿವಾರಿಸಿಕೊಳ್ಳಲು ಅವರು ಹಲವಾರು ಕ್ರಮಗಳನ್ನು ಪಾಲಿಸುತ್ತಾರೆ. ಆದರೆ ಬಾಯಿಯ ದುರ್ವಾಸನೆಗೆ ಮಧುಮೇಹ ಸಮಸ್ಯೆಯೂ ಕೂಡ ಕಾರಣವೇ? ಎಂಬುದನ್ನು ತಿಳಿಯಿರಿ.

ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾದಾಗ ಮಧುಮೇಹ ಸಮಸ್ಯೆ ಕಾಡುತ್ತದೆ. ಹಾಗಾಗಿ ಇದನ್ನು ನಿಯಂತ್ರಿಸುವುದು ಅವಶ್ಯಕ. ಇಲ್ಲವಾದರೆ ಜೀವಕ್ಕೆ ಅಪಾಯವಾಗಬಹುದು. ಹಾಗಾದ್ರೆ ಬಾಯಿಯಿಂದ ದುರ್ವಾಸನೆ ಬರುತ್ತಿದ್ದರೆ ಅದು ಮಧುಮೇಹದ ಲಕ್ಷಣವಂತೆ. ಹಾಗಾಗಿ ಈ ಬಗ್ಗೆ ಎಚ್ಚರಿಕೆಯಿಂದಿರಿ.

ದೇಹದಲ್ಲಿನ ರಕ್ತದಲ್ಲಿ ಸಕ್ಕರೆ ಜೀವಕೋಶಗಳಿಗೆ ಶಕ್ತಿಯನ್ನು ನೀಡುತ್ತದೆ. ಹಾಗೇ ಈ ಸಕ್ಕರೆ ಶಕ್ತಿಯಾಗಿ ಪರಿವರ್ತನೆಯಾಗಲು ಇನ್ಸುಲಿನ್ ಅತ್ಯಗತ್ಯ. ದೇಹದಲ್ಲಿ ಇನ್ಸುಲಿನ್ ಕೊರೆತೆಯಾದಾಗ ಜೀವಕೋಶಗಳಿಗೆ ಶಕ್ತಿ ಸಿಗುವುದಿಲ್ಲ. ಇದರಿಂದ ಜೀವಕೋಶಗಳಿಗೆ ಶಕ್ತಿ ನೀಡಲು ಲಿವರ್ ಕೊಬ್ಬನ್ನು ಒಡೆಯುತ್ತದೆ. ಇದರಿಂದ ಕೀಟೋನ್ ಎಂಬ ಆಮ್ಲ ರೂಪುಗೊಳ್ಳುತ್ತದೆ. ಇದು ಬಾಯಿಯ ವಾಸನೆಗೆ ಕಾರಣವಾಗುತ್ತದೆಯಂತೆ.

ಹಾಗಾಗಿ ನಿಮ್ಮ ಉಸಿರಾಟದಲ್ಲಿ ಕೊಳೆತ ಹಣ್ಣಿನ ವಾಸನೆ, ವಾಂತಿ ಅಥವಾ ಮಲದಂತ ವಾಸನೆಯಿದ್ದರೆ ಅದು ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗಿದೆ ಎಂಬುದನ್ನು ತಿಳಿಯಿರಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...