Kannada Duniya

ಹಲ್ಲುಗಳು ಕುಳಿಯಿಂದ ಬಾಯಿ ವಾಸನೆ ಬರುತ್ತಿದ್ದರೆ ಈ ಒಂದು ವಸ್ತುವನ್ನು ಬಳಸಿ

ಕೆಲವು ಜನರ ಹಲ್ಲಿನಲ್ಲಿ ಕುಳಿ ಇರುತ್ತದೆ. ಇದರಿಂದ ಹಲ್ಲುಗಳು ಕೊಳೆಯಲು ಶುರುವಾಗುತ್ತದೆ. ಇದಕ್ಕೆ ಬ್ಯಾಕ್ಟೀರಿಯಾಗಳೇ ಕಾರಣ. ಇದರಿಂದ ಬಾಯಿಂದ ದುರ್ವಾಸನೆ ಬರುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ.

ಬಾಯನ್ನು ಸರಿಯಾಗಿ ಸ್ವಚ್ಛಗೊಳಿಸದೇ ಇದ್ದಾಗ ಹಲ್ಲುಗಳ ಅಡಿಭಾಗದಲ್ಲಿ ಬ್ಯಾಕ್ಟೀರಿಯಾಗಳು ಸಂಗ್ರಹವಾಗಿ ಹಲ್ಲು ಕೊಳೆಯುವಂತೆ ಮಾಡುತ್ತದೆ. ಇದರಿಂದ ಬಾಯಿ ವಾಸನೆ ಬರುತ್ತದೆ. ಅರಿಶಿನ ಈ ಸಮಸ್ಯೆಗೆ ಬಹಳ ಪ್ರಯೋಜನಕಾರಿಯಾಗಿದೆ. ಅರಿಶಿನದಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್ , ಆ್ಯಂಟಿ ಫಂಗಲ್, ನಂಜುನಿವಾರಕ ಗುಣವಿದೆ. ಇದು ಹಲ್ಲುಗಳ ಕೊಳೆತಕ್ಕೆ ಕಾರಣವಾದ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುತ್ತದೆ.

ಹಾಗಾಗಿ ಅರಿಶಿನಕ್ಕೆ ಸಾಸಿವೆ ಎಣ್ಣೆ ಬೆರೆಸಿ ಹಲ್ಲು ಮತ್ತು ಒಸಡುಗಳ ಮೇಲೆ ಮಸಾಜ್ ಮಾಡಿ. ಹಾಗೇ ತ್ರಿಫಲ ಚೂರ್ಣ , ಅರಿಶಿನ ಮತ್ತು ಉಪ್ಪನ್ನು ತೆಗೆದುಕೊಂಡು ಮಿಕ್ಸ್ ಮಾಡಿ ಹಲ್ಲು ಮತ್ತು ಒಸಡುಗಳಿಗೆ ಹಚ್ಚಿ ಮಸಾಜ್ ಮಾಡಿ. ಹಾಗೇ ಅರಿಶಿನ ಮತ್ತು ಲವಂಗದ ಪುಡಿಯನ್ನು ನೀರಿನಲ್ಲಿ ಬೆರೆಸಿ ಅದರಿಂದ ಬಾಯಿ ಮುಕ್ಕಳಿಸಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...