Kannada Duniya

ಹಲ್ಲುಗಳು ಬಿಳಿಯಾಗಲು ಅಡುಗೆ ಸೋಡಾ, ನಿಂಬೆರಸ ಬಳಸಿದರೆ ಏನಾಗುತ್ತದೆ ಗೊತ್ತಾ?

ಪಾತ್ರೆಗಳನ್ನು ಸ್ವಚ್ಛಗೊಳಿಸಲು ಅಡುಗೆ ಸೋಡಾ, ನಿಂಬೆರಸವನ್ನು ಬಳಸುತ್ತಾರೆ. ಇದರಿಂದ ಪಾತ್ರೆಗಳು ಸ್ವಚ್ಛವಾಗುತ್ತದೆ. ಆದರೆ ಕೆಲವರು ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗಿರುತ್ತದೆ. ಹಾಗಾಗಿ ಅವರು ಅದನ್ನು ಸ್ವಚ್ಛಗೊಳಿಸಲು ಅಡುಗೆ ಸೋಡಾ ಮತ್ತು ನಿಂಬೆರಸವನ್ನು ಬಳಸುತ್ತಾರೆ. ಇದು ಸರಿಯೇ? ಎಂಬುದನ್ನು ತಿಳಿಯಿರಿ.

ನಿಂಬೆ ರಸ ಮತ್ತು ಅಡುಗೆ ಸೋಡಾವನ್ನು ಬೆರೆಸಿ ಹಲ್ಲುಗಳಿಗೆ ಹಚ್ಚಿದರೆ ಇದು ಹಲ್ಲುಗಳಿಗೆ ಅಪಾಯಕಾರಿಯಾಗುತ್ತದೆ ಎಂಬುದಾಗಿ ಸಂಶೋಧನೆಯಿಂದ ತಿಳಿದುಬಂದಿದೆ. ಆದರೆ ಇವುಗಳ ಪಿಹೆಚ್ ಮಟ್ಟವನ್ನು ಗಮನದಲ್ಲಿಟ್ಟುಕೊಂಡು ಇವುಗಳನ್ನು ಬೇರೆ ಬೇರೆಯಾಗಿ ಬಳಸಿದರೆ ಪ್ರಯೋಜನಕಾರಿಯಂತೆ.

ಸಾಮಾನ್ಯವಾಗಿ ಪಿಹೆಚ್ ಮಟ್ಟ ಕಡಿಮೆ ಇದ್ದರೆ ಆಮ್ಲೀಯತೆ ಹೆಚ್ಚಾಗಿರುತ್ತದೆ. ಹಾಗಾಗಿ ಅಡುಗೆ ಸೋಡಾದ ಪಿಹೆಚ್ಚ ಮಟ್ಟ ಹೆಚ್ಚಾಗಿದ್ದು, ಇದು ಕಡಿಮೆ ಆಮ್ಲೀಯತೆಯನ್ನು ಹೊಂದಿದೆ. ಆದರೆ ನಿಂಬೆಯ ಪಿಹೆಚ್ ಮಟ್ಟ ಕಡಿಮೆಯಾಗಿರುವ ಕಾರಣ ಇದು ಆಮ್ಲೀಯವಾಗಿದೆ. ಹಾಗಾಗಿ ನಿಂಬೆರಸವನ್ನು ಹಲ್ಲುಗಳಿಗೆ ಬಳಸಿದರೆ ಹಲ್ಲುಗಳ ದಂತಕವಚಕ್ಕೆ ಹಾನಿಯಾಗುತ್ತದೆ. ಇದರಿಂದ ದಂತಕ್ಷಯದ ಸಮಸ್ಯೆ ಕಾಡುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...