Kannada Duniya

ಸೊಳ್ಳೆಗಳ ಕಾಟದಿಂದ ತಪ್ಪಿಸಿಕೊಳ್ಳಲು ಈ ಮನೆಮದ್ದನ್ನು ಬಳಸಿ

ಬೇಸಿಗೆ ಕಾಲ ಪ್ರಾರಂಭವಾಗಿದೆ. ಈ ಸಮಯದಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚಾಗಿರುತ್ತದೆ. ಸೊಳ್ಳೆ ಕಡಿತದಿಂದ ಮಾರಣಾಂತಿಕ ರೋಗಗಳು ಸಂಭವಿಸುತ್ತದೆ. ಹಾಗಾಗಿ ಸೊಳ್ಳೆಗಳ ಕಾಟದಿಂದ ತಪ್ಪಿಸಿಕೊಳ್ಳಲು ಈ ಸಲಹೆ ಪಾಲಿಸಿ.

ಸೊಳ್ಳೆಗಳು ಮನೆಯೊಳಗೆ ಸುಳಿಯಬಾರದಂತಿದ್ದರೆ ಕರ್ಪೂರವನ್ನು ಮನೆಯೊಳಗೆ ಸುಡಿ. ಕರ್ಪೂರದ ವಾಸನೆ ಸೊಳ್ಳೆಗಳಿಗೆ ಇಷ್ಟವಾಗುವುದಿಲ್ಲ. ಹಾಗಾಗಿ ಸೊಳ್ಳೆ ಮನೆಗೆ ಬರುವುದಿಲ್ಲ.

ಸೊಳ್ಳೆಗಳನ್ನು ಸುಲಭವಾಗಿ ಮನೆಯಿಂದ ಓಡಿಸಲು ಲ್ಯಾವೆಂಡರ್ ಆಯಿಲ್ ಅನ್ನು ಬಳಸಿ. ಇದನ್ನು ಚರ್ಮದ ಮೇಲೆ ಹಚ್ಚುವುದರಿಂದ ಸೊಳ್ಳೆಗಳು ನಿಮ್ಮ ಹತ್ತಿರ ಬರುವುದಿಲ್ಲ.

ಟೀ ಟ್ರೀ ಆಯಿಲ್ ನ ಸಹಾಯದಿಂದ ಸೊಳ್ಳೆಗಳನ್ನು ಓಡಿಸಬಹುದು. ನಿಮ್ಮ ದೇಹಕ್ಕೆ ಟೀಟ್ರೀ ಆಯಿಲ್ ಅನ್ನು ತೆಂಗಿನೆಣ್ಣೆ ಜೊತೆಯಲ್ಲಿ ಬೆರೆಸಿ ಹಚ್ಚಿ.

ಹಾಗೇ ಸಂಜೆಯ ವೇಳೆ ಒಂದು ಪಾತ್ರೆಯಲ್ಲಿ ನಿಂಬೆ ಎಸೆನ್ಷಿಯಲ್ ಆಯಿಲ್ ಮತ್ತು ಲವಂಗವನ್ನು ಸೇರಿಸಿ ಒಂದು ಬಾಟಲಿನಲ್ಲಿ ಹಾಕಿ ಸ್ಪ್ರೇ ಮಾಡಿ. ಇದರಿಂದ ಸೊಳ್ಳೆಗಳು ಮನೆಯೊಳಗೆ ಬರುವುದಿಲ್ಲ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...