Kannada Duniya

ಮಕ್ಕಳನ್ನು ಪ್ರೀತಿಸಿ: ಅದೇ ನೀವು ಅವರಿಗೆ ನೀಡುವ ಉಡುಗೊರೆ

ಮಕ್ಕಳನ್ನು ಬೆಳೆಸುವುದೇ ಒಂದು ಸವಾಲು. ಪೋಷಕರು ಎಷ್ಟೇ ಜಾಗೃತೆ ವಹಿಸಿದರೂ ಸಾಲದು. ಇನ್ನು ಕೆಲವೊಮ್ಮೆ ಹೇಗಪ್ಪಾ ಇವರನ್ನು ಬೆಳೆಸುವುದು ಎಂಬ ಗೊಂದಲ ಉಂಟಾಗುತ್ತದೆ. ಇದಕ್ಕೆ ಸದ್ಗುರು ಕೆಲವಷ್ಟು ಟಿಪ್ಸ್ ನೀಡುತ್ತಾರೆ. ಅವು ಹೀಗಿವೆ.

ಮಕ್ಕಳಿಗೆ ನೀವು ನೀಡುವ ಪ್ರೀತಿ ಸಹಜವಾಗಿರಲಿ. ಅಂದರೆ ಅವರು ಕೇಳಿದ್ದನ್ನೆಲ್ಲಾ ಕೊಡಿಸುವುದು ಪ್ರೀತಿಯಲ್ಲ, ಅದು ನೀವು ಮಕ್ಕಳನ್ನು ಹಾಳು ಮಾಡುತ್ತಿದ್ದೀರಿ ಎಂಬ ಅರ್ಥವನ್ನು ನೀಡುತ್ತದೆ. ನಿಜವಾಗಿಯೂ ನೀವು ಅವರನ್ನು ಪ್ರೀತಿಸುತ್ತಿದ್ದರೆ ಆ ವಸ್ತುವಿನ ಮೌಲ್ಯ ತಿಳಿಸಿಕೊಡಿ. ಯಾವುದು ಅಗತ್ಯ ಹಾಗೂ ಯಾವುದು ಅನಗತ್ಯ ಎಂಬುದನ್ನು ವಿವರಿಸಿ ಹೇಳಿ.

ನಿಮ್ಮ ಕನಸುಗಳನ್ನು ಪೂರ್ತಿಗೊಳಿಸಲು ಮಕ್ಕಳಿದ್ದಾರೆ ಎಂದು ಭಾವಿಸಬೇಡಿ. ಅವರಿಗೆ ಅವರದ್ದೇ ಆದ ಕನಸುಗಳಿರುತ್ತವೆ. ಅದನ್ನು ಬೆಂಬತ್ತಲು ಬಿಡಿ. ಮಕ್ಕಳ ಕೆಲಸಕ್ಕೆ ಬೆಂಬಲ ನೀಡಿ. ಗುರಿ ಸಾಧಿಸಲು ಸಹಾಯ ಮಾಡಿ. ತಪ್ಪು ದಾರಿ ಹಿಡಿದಾಗ ತಿದ್ದಿ.

ಮನೆಯೇ ಮೊದಲ ಪಾಠಶಾಲೆ ಎಂಬುದು ಇಂದಿಗೂ, ಎಂದಿಗೂ ಬದಲಾಗದ ಸತ್ಯ. ಹಾಗಾಗಿ ಮನೆಯಲ್ಲಿ ಸದಾ ಸಂತಸ ನೆಮ್ಮದಿ ಇರುವಂತೆ ನೋಡಿಕೊಳ್ಳಿ. ಮಕ್ಕಳಿಗೆ ಭಯ, ಆತಂಕದ ವಾತಾವರಣ ಇರಬಾರದು. ಹೆದರದೆ ಮುನ್ನುಗ್ಗುವ ಸ್ಥೈರ್ಯವನ್ನು ಮಕ್ಕಳಲ್ಲಿ ಬೆಳೆಸಿ ಎನ್ನುತ್ತಾರೆ ಸದ್ಗುರು.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...