Kannada Duniya

ಸ್ವಸ್ತಿಕ್ ಚಿಹ್ನೆಯನ್ನು ಬಿಡಿಸುವಾಗ ಈ ನಿಯಮ ಪಾಲಿಸಿ

ಹಿಂದೂಧರ್ಮದಲ್ಲಿ ಪೂಜೆಯ ವೇಳೆ ಸ್ವಸ್ತಿಕ್ ಚಿಹ್ನೆಯನ್ನು ಬಿಡಿಸುತ್ತಾರೆ. ಇದನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಸ್ವಸ್ತಿಕ್ ಗಣೇಶನ ಸಂಕೇತವಾಗಿರುವ ಕಾರಣ ಪೂಜೆಯ ವೇಳೆ ಅದನ್ನು ಬಿಡುತ್ತಾರೆ. ಆದರೆ ಸ್ವಸ್ತಿಕ್ ಚಿಹ್ನೆ ಬಿಡಿಸುವಾಗ ಈ ನಿಯಮ ಪಾಲಿಸಿ.

ಸ್ವಸ್ತಿಕ್ ಚಿಹ್ನೆಯ್ನಯ ಯಾವಾಗಲೂ ಮನೆ ಅಥವಾ ಕಚೇರಿಯ ಪೂರ್ವ, ಈಶಾನ್ಯ ಮತ್ತು ಉತ್ತರ ದಿಕ್ಕಿನಲ್ಲಿ ಮಾಡಬೇಕು.

ಹಾಗೇ ಮನೆಯಲ್ಲಿ ತಾಮ್ರದ ಅಥವಾ ಅಷ್ಟಧಾತು ಸ್ವಸ್ತಿಕ ಚಿಹ್ನೆಯನ್ನು ಸ್ಥಾಪಿಸುವುದು ಮಂಗಳಕರ ಎನ್ನಲಾಗುತ್ತದೆ.

ಮಕ್ಕಳು ಅಧ್ಯಯನದಲ್ಲಿ ಏಕಾಗ್ರತೆಯನ್ನು ಹೊಂದಲು ಅವರ ಕೋಣೆಯಲ್ಲಿ ಸ್ವಸ್ತಿಕ್ ಚಿಹ್ನೆಯನ್ನು ನೈರುತ್ಯ ದಿಕ್ಕಿನಲ್ಲಿ ಇಡಬೇಕು.

ಹಾಗೇ ಸ್ವಸ್ತಿಕ ಚಿಹ್ನೆಯನ್ನು ಬಿಡಿಸುವಾಗ ಕೆಂಪು ಬಣ್ಣವನ್ನು ಬಳಸಬೇಕು. ಹಾಗೇ ವಾಸ್ತು ದೋಷನ್ನು ಹೋಗಲಾಡಿಸಲು ಮನೆಯ ಮುಖ್ಯದ್ವಾರದಲ್ಲಿ ಸ್ವಸ್ತಿಕ್ ಚಿಹ್ನೆಯನ್ನು ಬಿಡಿಸಬೇಕು. ಇದರಿಂದ ನಕರಾತ್ಮಕತೆ ದೂರವಾಗುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...