Kannada Duniya

ತೂಕ ನಿಯಂತ್ರಿಸಲು ಮನೆಯಲ್ಲಿಯೇ ಪ್ರತಿದಿನ ತಪ್ಪದೇ ಈ ಕೆಲಸ ಮಾಡಿ….!

ನಾವು ಆರೋಗ್ಯಕರವಾದ ಜೀವನ ನಡೆಸಲು ಮತ್ತು ನಮ್ಮ ದೇಹವನ್ನು ರೋಗಗಳಿಂದ ದೂರವಿಡಲು ಬಯಸಿದರೆ ಮೊದಲು ಹೃದಯ, ಲಿವರ್ ಸಮಸ್ಯೆ, ಮಧುಮೇಹ, ರಕ್ತದೊತ್ತಡ ಸಮಸ್ಯೆ ಬರದಂತೆ ಕಾಪಾಡಿಕೊಳ್ಳಬೇಕು.

ಅದಕ್ಕಾಗಿ ನಮ್ಮ ದೇಹದ ತೂಕ ಹೆಚ್ಚಾಗದಂತೆ ನೋಡಿಕೊಳ್ಳಿ. ಯಾಕೆಂದರೆ ತೂಕ ಹೆಚ್ಚಳ ಅನೇಕ ಸಮಸ್ಯೆಗೆ ಕಾರಣವಾಗುತ್ತದೆ. ಹಾಗಾಗಿ ತೂಕವನ್ನು ನಿಯಂತ್ರಣದಲ್ಲಿಡಲು ಪ್ರತಿದಿನ ಮನೆಯಲ್ಲಿಯೇ ತಪ್ಪದೇ ಈ ಕೆಲಸ ಮಾಡಿ.

ಆಹಾರವನ್ನು ತ್ಯಜಿಸುವ ಮೂಲಕ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವುದು ತಪ್ಪು. ಇದು ಅನೇಕ ಸಮಸ್ಯೆಗಳಿಗೆ ಕಾರಣವಾಗಿತ್ತದೆ. ಹಾಗಾಗಿ ಪ್ರೋಟೀನ್ ಭರಿತ ಆಹಾರ, ಪೋಷಕಾಂಶಗಳು ಸಮೃದ್ಧವಾಗಿರುವ ತರಕಾರಿಗಳು ಮತ್ತು ಹಣ್ಣುಗಳನ್ನು ಸೇವಿಸಿ.

ಎಣ್ಣೆ ಮತ್ತು ತುಪ್ಪದಿಂದ ತಯಾರಿಸಿದ ಆಹಾರಗಳು ದೇಹದಲ್ಲಿ ಕೊಬ್ಬಿನ ಪ್ರಮಾಣವನ್ನು ಹೆಚ್ಚಿಸುತ್ತದೆ. ಹಾಗಾಗಿ ಎಣ್ಣೆ ತುಪ್ಪ ಬಳಸುವುದನ್ನು ಕಡಿಮೆ ಮಾಡಿ.

ಪ್ರತಿದಿನ ಮೂರು ಲೀಟರ್ ನೀರನ್ನು ಕುಡಿಯಿರಿ. ಹಾಗೇ ಪ್ರತಿದಿನ 7 ಗಂಟೆಗಳ ಕಾಲ ನಿದ್ರೆ ಮಾಡಿ. ಇದಕ್ಕಿಂತ ಹೆಚ್ಚು ಅಥವಾ ಕಡಿಮೆ ನಿದ್ರೆ ಮಾಡಿದರೆ ತೂಕದಲ್ಲಿ ಹೆಚ್ಚಳವಾಗುತ್ತದೆ.

ನೀವು ಬೇಗನೆ ತೂಕ ಇಳಿಸಿಕೊಳ್ಳಲು ಈ ಡಯೆಟ್ ಯೋಜನೆಯನ್ನು ಅನುಸರಿಸಿ

ಪ್ರತಿದಿನ ವ್ಯಾಯಾಮಗಳನ್ನು ಮಾಡಿ. ತೂಕ ನಿಯಂತ್ರಿಸುವ ಯೋಗಗಳನ್ನು ಅಭ್ಯಾಸ ಮಾಡಿ. ಒಂದೇ ಕಡೆ ಕುಳಿತುಕೊಳ್ಳುವ ಬದಲು ಕೆಲಸಗಳನ್ನು ಮಾಡಿರಿ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...