Kannada Duniya

ಜನನ ನಿಯಂತ್ರಣ ಮಾತ್ರೆ ಮತ್ತು ಕಾಪರ್ ಟಿ ಯಲ್ಲಿ ಯಾವುದು ಉತ್ತಮ ಎಂಬುದು ತಿಳಿಬೇಕಾ…?

ಇಂದಿನ ಸಮಯದಲ್ಲಿ ಮಹಿಳೆಯರು ತಮ್ಮ ಅನಗತ್ಯ ಗರ್ಭಧಾರಣೆಯನ್ನು ತಪ್ಪಿಸಲು ವಿವಿಧ ಕ್ರಮಗಳನ್ನು ಅಳವಡಿಸಿಕೊಳ್ಳಬಹುದು. ಮಾತ್ರೆಗಳು, ಕಾಪರ್ ಟೀ, ಚುಚ್ಚುಮದ್ದು ಹಲವು ಆಯ್ಕೆಗಳಿವೆ. ಯಾವುದೇ ಜನನ ನಿಯಂತ್ರಣ ಮಾತ್ರೆ ಮತ್ತು ಕಾಪರ್ ಟಿ ಯಲ್ಲಿ ಯಾವುದು ಉತ್ತಮ. ಯಾವುದು ಮಹಿಳೆಯರು ಗರ್ಭಧರಿಸದಂತೆ ತಡೆಯುತ್ತದೆ ಎಂಬುದನ್ನು ತಿಳಿದುಕೊಳ್ಳಿ.

ಜನನ ನಿಯಂತ್ರಣ ನಿಯಂತ್ರಣ ಮಾತ್ರೆಗಳು ಹಾರ್ಮೋನ್ ಮಾತ್ರೆಗಳಾಗಿವೆ. ಇದು ಮೊಟ್ಟೆಯ ರಚನೆಯ ಪ್ರಕ್ರಿಯೆಯನ್ನು ನಿಲ್ಲಿಸುತ್ತದೆ. ಅಂಡೋತ್ಪತ್ತಿ ಸಮಯದಲ್ಲಿ ಅಂಡಾಶಯದಿಂದ ಮೊಟ್ಟೆಗಳು ಹೊರಬರುವುದನ್ನು ತಡೆಯುತ್ತದೆ. ವೀರ್ಯ ಗರ್ಭಾಶಯವನ್ನು ತಲುಪದಂತೆ ತಡೆಯಲು ಗರ್ಭಕಂಠದ ಲೋಳೆಗಳನ್ನು ದಪ್ಪವಾಗಿಸುತ್ತದೆ. ಇದರಿಂದ ಮಹಿಳೆಯರು ಗರ್ಭಿಣಿಯಾಗುವುದಿಲ್ಲ. ಆದರೆ ಇದನ್ನು ಸೇವಿಸಿವಾಗ 2 ಮಾತ್ರೆಗಳ ನಡುವೆ 24 ಗಂಟೆಗಳ ಅಂತರವಿರಬೇಕು.

ಕಾಪರ್ ಟಿ ಇದರಲ್ಲಿ ತಾಮ್ರವಿರುತ್ತದೆ. ಇದು ಗರ್ಭಾಶಯದ ಒಳಪದರಕ್ಕೆ ಅಂಟಿಕೊಳ್ಳುತ್ತದೆ. ಇದರಿಂದ ಗರ್ಭಧರಿಸಲು ಕಷ್ಟವಾಗುತ್ತದೆ. ಆದರೆ ಇದನ್ನು 2 ಅಥವಾ 5 ವರ್ಷಕ್ಕೊಮ್ಮೆ ಬದಲಾಯಿಸುತ್ತಿರಬೇಕು. ಆದರೆ ಇದು ದೇಹಕ್ಕೆ ಹೊಂದಿಕೊಳ್ಳದಿದ್ದರೆ ಸಮಸ್ಯೆಯಾಗುತ್ತದೆ.

ಮಧುಮೇಹಿಗಳ ರಕ್ತದಲ್ಲಿ ಸಕ್ಕರೆ ಪ್ರಮಾಣ ನಿಯಂತ್ರಿಸಲು ಈ ಯೋಗಾಸನ ಮಾಡಿ

ಹಾಗಾಗಿ ಇವೆರಡರಲ್ಲಿ ಗರ್ಭದಾರಣೆಯನ್ನು ತಡೆಯಲು ಗರ್ಭನಿರೋಧಕ ಮಾತ್ರೆಗಳು ಉತ್ತಮ ಆಯ್ಕೆಯಾಗಿದೆ. ಯಾಕೆಂದರೆ ಕಾಪರ್ ಟಿ ಗರ್ಭಾಶಯದಲ್ಲಿ ಕೆಲವು ಬದಲಾವಣೆಗಳನ್ನು ಉಂಟುಮಾಡಬಹುದು. ಆದರೆ ಹೆರಿಗೆಯ ಬಳಿಕ ಗರ್ಭಧಾರಣೆಯನ್ನು ತಡೆಯಲು ಕಾಪರ್ ಟಿ ಬಳಸುವುದು ಉತ್ತಮ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...