Kannada Duniya

ಕೋಪವನ್ನು ನಿಯಂತ್ರಿಸಲು ಈ ಯೋಗ ಮಾಡಿ

ಕೋಪ ಮನುಷ್ಯನ ಸಹಜವಾದ ಗುಣಲಕ್ಷಣಗಳಲ್ಲಿ ಒಂದು. ಎಲ್ಲರಿಗೂ ಕೋಪ ಬಂದೇ ಬರುತ್ತದೆ. ಆದರೆ ಅದನ್ನು ನಿಯಂತ್ರಿಸುವುದು ಅವಶ್ಯಕ. ಇಲ್ಲವಾದರೆ ಅದರಿಂದ ಅನಾಹುತವಾಗುತ್ತದೆ. ಹಾಗಾಗಿ ಕೋಪವನ್ನು ನಿಯಂತ್ರಿಸಲು ಈ ಯೋಗ ಅಭ್ಯಾಸ ಮಾಡಿ.

ಬಾಲಾಸನ : ನೆಲದ ಮೇಲೆ ಮಂಡಿಯೂರಿ ಕುಳಿತುಕೊಳ್ಳಿ. ನಿಮ್ಮ ಮೊಣಕಾಲನ್ನು ಸೊಂಟಕ್ಕಿಂತ ಅಂಗಲವಾಗಿಸಿ ಮುಂದಕ್ಕೆ ಬಾಗಿ ನಿಮ್ಮ ತಲೆಯನ್ನು ನೆಲದ ಮೇಲೆ ಇರಿಸಿ. ಈ ಸ್ಥಾನದಲ್ಲಿ ಕೆಲವು ಸೆಕೆಂಡುಗಳ ಕಾಲ ಹಿಡಿದುಕೊಳ್ಳಿ.

ಸರ್ವಂಗಾಸನ : ಯೋಗ ಚಾಪೆಯ ಮೇಲೆ ಮಲಗಿಕೊಳ್ಳಿ. ನಿಮ್ಮ ಎರಡು ಪಾದಗಳ ಬೆರಳುಗಳನ್ನು ಜೋಡಿಸಿ, ಎರಡೂ ಕಾಲುಗಳನ್ನು ಒಟ್ಟಿಗೆ ಮೇಲಕ್ಕೆ ಎತ್ತಲು ಪ್ರಯತ್ನಿಸಿ. ಅಂಗೈಗಳಿಂದ ಸೊಂಟವನ್ನು ಹಿಡಿದುಕೊಳ್ಳಿ. ಮತ್ತು ಪಾದಗಳನ್ನು ಮೇಲಕ್ಕೆತ್ತಿ ಮತ್ತು ಎಷ್ಟು ಮೇಲಕ್ಕೆ ಎತ್ತಲೂ ಸಾಧ್ಯವೋ ಅಷ್ಟು ಮೇಲೆ ಎತ್ತಿ.

ನಿಮ್ಮ ಇಡೀ ದೇಹದ ಭಾರವು ಭುಜಗಳ ಮೇಲೆ ಮಾತ್ರ ಇರಬೇಕು. ಸ್ವಲ್ಪ ಸಮಯ ಈ ಸ್ಥಾನದಲ್ಲಿ ಇರಿ. ಬಳಿಕ ಕಾಲುಗಳನ್ನು ಹಿಂದಕ್ಕೆ ತಂದು ಮೊದಲಿನ ಸ್ಥಿತಿಗೆ ಬನ್ನಿ.

ಶವಾಸನ : ನಿಮ್ಮ ಬೆನ್ನಿನ ಮೇಲೆ ಮಲಗಿ ನಿಮ್ಮ ಪಾದಗಳನ್ನು ಸೊಂಟದ ಅಗಲಕ್ಕೆ ತಂದು ಕೈಗಳನ್ನು ನಿಮ್ಮ ದೇಹದಿಂದ ಸ್ವಲ್ಪ ದೂರವಿಟ್ಟು ಕಣ್ಣು ಮುಚ್ಚಿ ವಿಶ್ರಾಂತಿ ಪಡೆಯಿರಿ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...