Kannada Duniya

ಮಧುಮೇಹಿಗಳ ರಕ್ತದಲ್ಲಿ ಸಕ್ಕರೆ ಪ್ರಮಾಣ ನಿಯಂತ್ರಿಸಲು ಈ ಯೋಗಾಸನ ಮಾಡಿ…!

ಮಧುಮೇಹಿಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ಸುಲಭವಲ್ಲ. ಇದಕ್ಕಾಗಿ ಮಧುಮೇಹಿಗಳು ಆಹಾರ ಪದ್ಧತಿಯ ಬಗ್ಗೆ ಹೆಚ್ಚು ಗಮನಕೊಡಬೇಕು.

ಪ್ರತಿದಿನ ಯೋಗ, ವ್ಯಾಯಾಮಗಳನ್ನು ಕಡ್ಡಾಯವಾಗಿ ಮಾಡಬೇಕು. ಇದರಿಂಧ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡಬಹುದು. ಹಾಗಾಗಿ ಮಧುಮೇಹಿಗಳು ಪ್ರತಿದಿನ ಧನುರಾಸನ ಮಾಡಿ.

ತಜ್ಞರ ಪ್ರಕಾರ ಧನುರಾಸನ ಮಾಡುವುದರಿಂದ ಮೇದೋಜ್ಜೀರಕ ಗ್ರಂಥಿ ಮತ್ತು ಕರುಳಿನ ಕಾರ್ಯಗಳು ಉತ್ತಮಗೊಳ್ಳುತ್ತದೆ.  ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಧನುರಾಸನ ಮಾಡುವುದರಿಂದ ಸಕ್ಕರೆ ಅಂಶ ನಿಯಂತ್ರಣದಲ್ಲಿರುತ್ತದೆ. ಹಾಗಾಗಿ ಮಧುಮೇಹಿಗಳು ಪ್ರತಿದಿನ ಧನುರಾಸನವನ್ನು ಅಭ್ಯಾಸ ಮಾಡಿ.

ಗರ್ಭಾವಸ್ಥೆಯಲ್ಲಿ ದೇಹವು ಸದೃಢವಾಗಿರಲು ಈ ಯೋಗಾಸನವನ್ನು ಮಾಡಿ

ಧನುರಾಸನ ಮಾಡುವಾಗ ನಿಮ್ಮ ಹೊಟ್ಟೆಯ ಮೇಲೆ ನೆಲದ ಮೇಲೆ ಮಲಗಿ ಕಾಲುಗಳನ್ನು ಮೇಲಕೆತ್ತಿ ನಿಮ್ಮ ಕೈಗಳಿಂದ ಹಿಡಿದುಕೊಳ್ಳಿ. ನಿಮ್ಮ ತೂಕವನ್ನು ಹೊಟ್ಟೆಯ ಮೇಲೆ ಹಾಕಿ 30 ಸೆಕೆಂಡುಗಳ ಕಾಲ ಈ ಭಂಗಿಯಲ್ಲಿ ಇರಿ. ಧನುರಾಸನ ಮಾಡುವುದರಿಂದ ಒತ್ತಡ, ಆಯಾಸ ಪರಿಹಾರವಾಗುತ್ತದೆ. ಜೀರ್ಣಾಂಗ ವ್ಯವಸ್ಥೆಯು ಬಲಗೊಳ್ಳುತ್ತದೆ. ಬೆನ್ನು ಮೂಳೆಯು ಬಲಗೊಳ್ಳುತ್ತದೆ. ದೇಹವು ಮೃದುವಾಗುತ್ತದೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...