Kannada Duniya

ನಿಮ್ಮ ಸಂಗಾತಿಯ ಬಗ್ಗೆ ಈ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದು ಒಳ್ಳೆಯದಲ್ಲವಂತೆ

ಸಂಬಂಧದಲ್ಲಿ ಸಂಗಾತಿಗಳು ತಮ್ಮ ಸಂಗಾತಿ ಹೀಗೆ ಇರಬೇಕು ಎಂಬ ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ. ಆದರೆ ಇದು ಒಳ್ಳೆಯದಲ್ಲ. ಯಾಕೆಂದರೆ ನಿಮ್ಮ ನಿರೀಕ್ಷೆ ಸುಳ್ಳಾದರೆ ಅದರಿಂದ ನಿಮ್ಮ ಸಂಬಂಧ ಹಾಳಾಗುತ್ತದೆ. ಹಾಗಾಗಿ ನಿಮ್ಮ ಸಂಬಂಧದಲ್ಲಿ ನಿಮ್ಮ ಸಂಗಾತಿಯ ಬಗ್ಗೆ ಈ ನಿರೀಕ್ಷೆಗಳನ್ನು ಇಟ್ಟುಕೊಳ್ಳಬೇಡಿ.

ನಿಮ್ಮ ಸಂಗಾತಿ ಯಾವಾಗಲೂ ಪರಿಪೂರ್ಣರಾಗಿರಬೇಕು ಎಂಬ ನಿರೀಕ್ಷೆ ಮಾಡಬೇಡಿ. ಒಂದು ವೇಳೆ ಅವರು ಹಾಗೆ ಇರದಿದ್ದರೆ ನಿಮಗೆ ಬೇಸರವಾಗುತ್ತದೆ. ಹಾಗಾಗಿ ಅವರು ಹೇಗಿರುತ್ತಾರೋ ಹಾಗೇ ಅವರನ್ನು ಸ್ವೀಕರಿಸಿ.

ಕೆಲವರು ತಾವು ಏನೇ ಮಾಡಿದರೂ ಅದು ಸರಿ, ಹಾಗಾಗಿ ತನ್ನ ಸಂಗಾತಿ ಕೂಡ ತನ್ನನ್ನು ಸರಿ ಎಂದು ಒಪ್ಪಿಕೊಳ್ಳಬೇಕು ಎಂದು ಬಯಸುತ್ತಾರೆ. ಆದರೆ ಇದು ಸರಿಯಲ್ಲ. ಇದು ನೀವು ನಿಮ್ಮ ಸಂಗಾತಿಯನ್ನು ನಿಯಂತ್ರಿಸುವಂತೆ ತೋರುತ್ತದೆ.

ಹಾಗೇ ಕೆಲವರು ತಾನು ಏನು ಹೇಳದಿದ್ದರೂ ಸಂಗಾತಿ ತನ್ನನ್ನು ಅರ್ಥಮಾಡಿಕೊಳ್ಳಬೇಕು ಎಂಬ ನಿರೀಕ್ಷೆ ಇರುತ್ತದೆ. ಆದರೆ ಇದು ತಪ್ಪು. ನಿಮ್ಮ ಮನಸ್ಸಿನಲ್ಲಿರುವುದನ್ನು ಕಂಡುಕೊಳ್ಳುವುದು ಅಸಾಧ್ಯ.

ಅಲ್ಲದೇ ಕೆಲವರು ತನ್ನ ಸಂಗಾತಿ ತನ್ನ ಹಾಗೇ ಇರಬೇಕು ಎಂದು ಬಯಸುತ್ತಾರೆ. ಆತನ ಗುಣ ತನಗೆ ವಿರುದ್ಧವಾಗಿರಬಾರದು ಎಂದು ಭಾವಿಸುತ್ತಾರೆ. ಆದರೆ ಎಲ್ಲರ ಗುಣ ಒಂದೇ ರೀತಿ ಇರಲು ಸಾಧ್ಯವಿಲ್ಲ ಎಂಬುದನ್ನು ನೀವು ತಿಳಿಯುವುದು ಉತ್ತಮ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...